ಸುಳ್ಯದ ಅಂಗಡಿ ಮಾಲಕ, ಸುರೇಶ್ ಜಾಕೆ -ಪಲ್ಲೋಡಿ ನಿಧನ

0

ಐವತ್ತೊಕ್ಲು ಗ್ರಾಮದ ಪಲ್ಲೋಡಿ -ಜಾಕೆ.ದಿ.ರಾಮಣ್ಣ ಗೌಡ ಮತ್ತು ದಿ.ಶ್ರೀಮತಿ ಚೆನ್ನಕ್ಕ ರವರ ಪುತ್ರ ಸುರೇಶ್ ರವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದ.1 ರಂದು ನಿಧನರಾದರು
.ಅವರಿಗೆ 59 ವರುಷ ವಯಸ್ಸಾಗಿತ್ತು.
ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅವರು ಸುಳ್ಯದ ಗಾಂಧಿನಗರದಲ್ಲಿ ಸುಮಾರು 20 ವರುಷಗಳಿಂದ ಅಂಗಡಿ ನಡೆಸುತ್ತಿದ್ದರು. 3 ವರುಷಗಳ ಹಿಂದೆ ಸುಳ್ಯದ ಪರಿವಾರಕಾನದಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು.
ಮೃತರು ಪತ್ನಿ ಶ್ರೀಮತಿ ಇಂದಿರಾ, ಸಹೋದರ ಹರೀಶ, ಸಹೋದರಿಯರಾದ ಶ್ರೀಮತಿ ಮೀರಾ, ಶ್ರೀಮತಿ ತಾರಾ, ಶ್ರೀಮತಿ ಪ್ರೇಮಾ, ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ದ.1ರಂದು ರಾತ್ರಿ ಪಲ್ಲೋಡಿಯಲ್ಲಿ ನಡೆಯಿತು.