ವಳಲಂಬೆಯಲ್ಲಿ ನಡೆದ ಹಾರ್ಟ್ ಫುಲ್ನೆಸ್ ಧ್ಯಾನ ಶಿಬಿರ

0

ನ. ೨೭ ರಿಂದ ಮೂರು ದಿನಗಳ ಕಾಲ ವಳಲಂಬೆ ದೇವಸ್ಥಾನದ ಸಭಾಂಗಣದಲ್ಲಿ ಹಾರ್ಟ್ ಫುಲ್ನೆಸ್ ಸಂಸ್ಥೆಯ ವತಿಯಿಂದ ಧ್ಯಾನ ಶಿಬಿರ ನಡೆಯಿತು. ಗುತ್ತಿಗಾರಿನ ಸ್ವಾತಿ ಸಂಕೀರ್ಣದ ಮಾಲ್ಹಕ ಸುಬ್ರಹ್ಮಣ್ಯ ಭಟ್ ಈ ಶಿಬಿರದ ಮುಂದಾಳುತ್ವ ವಹಿಸಿದ್ದರು. ತರಬೇತುದಾರರಾಗಿ ನಳಿನಿ ಮಂಗಳೂರು, ಗೋವಿಂದಯ್ಯ ಕಾಂಚೋಡು ಮತ್ತು ಭಾರತಿ ಪಂಜಿಗಾರು ಭಾಗವಹಿಸಿದರು.

ಸುಮಾರು ೨೫ ಮಂದಿ ಸ್ಥಳೀಯರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಮುಂದಿನ ದಿನಗಳಲ್ಲಿ ಮಾವಿನಕಟ್ಟೆ ಮತ್ತು ಕೊಲ್ಲಮೊಗ್ರಗಳಲ್ಲಿ ಶಿಬಿರವನ್ನು ಆಯೋಜಿಸಲಾಗುವುದೆಂದು ಸುಬ್ರಹ್ಮಮಣ್ಯ ಭಟ್ ತಿಳಿಸಿದ್ದಾರೆ. ಆಸಕ್ತರು ಧ್ಯಾನ ತರಬೇತಿ ಪಡೆಯಲು ಸಂಪರ್ಕಿಸಬಹುದು.