ಡಿ.3ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ

0

ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಮೃತ್ಯುಂಜಯ ಹೋಮವು ಡಿ.3ರಂದು ಬೆಳಿಗ್ಗೆ ಜರುಗಲಿದೆ. ಬೆಳಿಗ್ಗೆ 6ರಿಂದ ಸಾಮೂಹಿಕ ಪ್ರಾರ್ಥನೆಯೊಂದಿಗೆ ಮೃತ್ಯುಂಜಯ ಹೋಮವು ಪ್ರಾರಂಭಗೊಂಡು ಬೆಳಿಗ್ಗೆ 8ಕ್ಕೆ ಪೂರ್ಣಾಹುತಿಯೊಂದಿಗೆ ಮುಕ್ತಾಯಗೊಳ್ಳಲಿದೆ. ಮೃತ್ಯುಂಜಯ ಹೋಮಕ್ಕೆ ಸಮರ್ಪಣೆ ಮಾಡುವ ಸಮಿದೆ ಹಾಗೂ ಇನ್ನಿತರ ಪರಿಕರಗಳನ್ನು ಸಮರ್ಪಿಸುವವರು ಡಿ‌.2ರಂದು ಬೆಳಿಗ್ಗೆ ದೇವಸ್ಥಾನಕ್ಕೆ ತಲುಪಿಸುವಂತೆ ದೇವಸ್ಥಾನದ ವತಿಯಿಂದ ತಿಳಿಸಲಾಗಿದೆ. ಮೃತ್ಯುಂಜಯ ಹೋಮದ ಬಳಿಕ ಬಳಿಕ ದೇವಸ್ಥಾನದ ಬೈಲುವಾರು ಸಮಿತಿಯ ಸಭೆಯು ನಡೆಯಲಿದ್ದು, ಮೃತ್ಯುಂಜಯ ಹೋಮ ಹಾಗೂ ಬೈಲುವಾರು ಸಮಿತಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸುವಂತೆ ದೇವಾಲಯದ ವತಿಯಿಂದ ಸೂಚಿಸಲಾಗಿದೆ.