ಜಟ್ಟಿಪಳ್ಳ ಮನೆಯಿಂದ ಚಿನ್ನ ಕಳ್ಳತನ ಮಾಡಿದ್ದ ಆರೋಪಿ ಪೊಲೀಸರ ಬಲೆಗೆ

0

ಕಾಸರಗೋಡಿನ ಹಾಶಿಂ ಆರೋಪಿ

ಸುಳ್ಯ ಜಟ್ಟಿಪಳ್ಳದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಮೋಹನದಾಸ ಮುದ್ಯರವರ ಮನೆಯಿಂದ ಒಂದು ತಿಂಗಳ ಹಿಂದೆ ಚಿನ್ನ ಕಳ್ಳತನ ಮಾಡಿದ್ದ ಕಳ್ಳನನ್ನು ಸುಳ್ಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳತನ ಮಾಡಿದ ಆರೋಪಿ ಕಾಸರಗೋಡು ಮೂಲದ ಹಾಶಿಂ(43) ಎಂದು ಗೊತ್ತಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ಆತನನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಅಡಿಷನಲ್ ಎಸ್ಪಿ, ಹಾಗೂ ಪುತ್ತೂರು ಡಿ ವೈ ಎಸ್ ಪಿ ಅವರ ಮಾರ್ಗದರ್ಶನ ಮೇರೆಗೆ ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಉಪನಿರೀಕ್ಷಕ ಈರಯ್ಯ ದೂಂತೂರ್, ಸಿಬ್ಬಂದಿ ವರ್ಗದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.