ಯುಕೋ ಬ್ಯಾಂಕ್ ನಿವೃತ್ತ ಎಜಿಎಂ ಗೋಪಾಲಕೃಷ್ಣ ಹನಿಯಡ್ಕ ನಿಧನ

0

ಯುಕೋ ಬ್ಯಾಂಕ್ ನಿವೃತ್ತ ಎಜಿಎಂ, ಅಜ್ಜಾವರ ಗ್ರಾಮದ ಹನಿಯಡ್ಕ ಗೋಪಾಲಕೃಷ್ಣ ರವರು ಅಲ್ಪ ಕಾಲದ ಅಸೌಖ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ಸುಮಾರು ೬೪ ವರ್ಷ ವಯಸ್ಸಾಗಿತ್ತು.
ಯುಕೋ ಬ್ಯಾಂಕ್‌ನಲ್ಲಿ ಸುದೀರ್ಘವಾಗಿ ಅವರು ಸೇವೆ ಸಲ್ಲಿಸಿದ್ದರು. ಸಾಮಾಜಿಕವಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಶ್ರೀಮತಿ ಗೀತಾ, ಪುತ್ರ ಡಾ| ರಾಘವೇಂದ್ರ ಹನಿಯಡ್ಕ, ಸೊಸೆ, ಮೊಮ್ಮಗು ಹಾಗೂ ಸಹೋದರರು, ಸಹೋದರಿಯರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ಡಿ.೪ರಂದು ಅವರ ಮೃತದೇಹವನ್ನು ಹನಿಯಡ್ಕದ ಅವರ ಮನೆಗೆ ತಂದು ಅಂತ್ಯಕ್ರಿಯೆ ನಡೆಸಲಾಗುವುದೆಂದು ಅವರು ಮನೆಯವರು ತಿಳಿಸಿದ್ದಾರೆ.