ಅರಂತೋಡಿನ ಯುವತಿ ಎರ್ನಾಕುಲಂನಲ್ಲಿ ಪತ್ತೆ

0

ಅರಂತೋಡಿನ ಲಾವಣ್ಯ (18ವರ್ಷ)ಎಂಬ ಯುವತಿ ಅಕ್ಟೋಬರ್ 28ರಂದು ಕಾಣೆಯಾಗಿರುವ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮನೆಯವರು ದೂರು ನೀಡಿದ್ದರು.
ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಸುಳ್ಯ ಪೊಲೀಸರು ಡಿಸೆಂಬರ್ 2 ರಂದು ಕೇರಳದ ಎರ್ನಾಕುಲಂ ಎಂಬಲ್ಲಿ ಲಾವಣ್ಯ ರನ್ನು ಪತ್ತೆ ಹಚ್ಚಿ ಸುಳ್ಯಕ್ಕೆ ಕರೆತಂದು ಅವರನ್ನು ಅವರ ಮನೆಯವರೊಂದಿಗೆ ಕಳುಹಿಸಿ ಕೊಟ್ಟಿರುವುದಾಗಿ ತಿಳಿದುಬಂದಿದೆ.
ಆಕೆ ಅಲ್ಲಿಗೆ ಹೋಗಿ ಅಲ್ಲಿನ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದರೆನ್ನಲಾಗಿದೆ.