ಕೆ ವಿ ಜಿ ಐಪಿಎಸ್ ನ ವಿದ್ಯಾರ್ಥಿಗಳ ಸಾಧನೆ

0

ಬ್ರಹ್ಮಗಿರಿ ಸಹೋದಯ ಕಾಂಪ್ಲೆಕ್ಸ್ ಕೊಡಗು ಇದರ ಸಹಯೋಗದಲ್ಲಿ ನ .24 ರಂದು ಮಡಿಕೇರಿಯ ಸೈನಿಕ ಶಾಲೆಯಲ್ಲಿ ಫುಟ್ಬಾಲ್ / ಥ್ರೋಬಾಲ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.


ಫುಟ್ಬಾಲ್ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ 16 ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು.
10ನೇ ತರಗತಿಯ ಇಹಸನ್ , ಸನಾಫ್, ಅಂಫಸ್, ಅನ್ಸಿಫ್, ಮೊಹಮ್ಮದ್ ಶಾಝ್, ಫಝನ್ , ಶಿಶಿರ್, ಚಿರಂತ್, 9ನೇ ತರಗತಿಯ ಅಮಿರುದ್ದಿನ್, ಅನೀಶ್, ವರ್ಷಿತ್, ವೇಕಾಂಶ್, ದ್ರುವ, ಚಮನ್, ಉತ್ಸವ್, ಇಂಬ್ರಾನ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ 10ನೇ ತರಗತಿಯ ಸನಫ್ ಉತ್ತಮ ಆಟಗಾರ ಎಂಬ ಬಿರುದನ್ನು ಪಡೆದುಕೊಂಡನು.

ಥ್ರೋ ಬಾಲ್ ಸ್ಪರ್ಧೆಯಲ್ಲಿ 11 ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಹತ್ತನೇ ತರಗತಿಯ ಜನನಿ ಡಿ ಕೆ, ಲಹರಿ ಬಿ ಟಿ, ಹಿಮಾನಿ ಬಿ, ಭವನ ಕೆ ಪಿ, 9ನೇ ತರಗತಿಯ ಪುನರ್ವಿ ಕೆ, ಭೂಮಿಕ ಯಸ್, ಆಯಿಷಾ ಮುಹಸಿನ ಎಂಟನೇ ತರಗತಿಯ ಪ್ರತೀಕ ಎಂ ಕೆ, ಚೈತನ್ಯ ಎಸ್ ಬಿ, ಆಯಿಷಾ ನಶ್ವ , ವಿಜ್ಞಾ ಭಾಗವಹಿಸಿ
ಶಾಲಾ ಆಡಳಿತ ಮಂಡಳಿ ಮತ್ತು ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್ , ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಮತ್ತು ಶಿಕ್ಷಕ ವೃಂದದವರ ಮೆಚ್ಚುಗೆಗೆ ಪಾತ್ರರಾದರು.
ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಕರಾದ ತೀರ್ಥವರ್ಣ ಬಳ್ಳಡ್ಕ, ಶ್ರೀಮತಿ ಸುಪ್ರಿಯ ಮತ್ತು ಆಶಾ ಜ್ಯೋತಿ ಮಾರ್ಗದರ್ಶನ ನೀಡಿದರು.