ಸುಳ್ಯ ರೇಂಜ್ ಮುಸಾಬಖಕ್ಕೆ ತೆರೆ

0

ಬೆಳ್ಳಾರೆ ಚಾಂಪಿಯನ್, ಅಜ್ಜಾವರ ರನ್ನರ್ಸ್, ಬಯಂಬು ತೃತೀಯ

ಸುಳ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮೇನೇಜ್ ಮೆಂಟ್ ಅಸೋಸಿಯೇಷನ್ ಸಂಯುಕ್ತ ಆಶ್ರಯದಲ್ಲಿ ನಡೆದ ಸುಳ್ಯ ರೇಂಜ್ ಮಟ್ಟದ ಮದ್ರಸ ವಿದ್ಯಾರ್ಥಿಗಳ ಕಲಾ ಸಾಹಿತ್ಯ ಸ್ಪರ್ಧೆ ಮುಸಾಬಖ 2k23 ಡಿಸೆಂಬರ್ 2 ,3 ತಾರೀಕುಗಳಲ್ಲಿ ಮಂಡೆಕೋಲು ಮದ್ರಸ ವಠಾರದಲ್ಲಿ ನಡೆಯಿತು.

ಶನಿವಾರ ಬೆಳಿಗ್ಗೆ ಸ್ವಾಗತ ಸಮಿತಿ ಚೇರ್ಮನ್ ರಾಫಿ ಸಾಲೆಕ್ಕಾರ್ ಧ್ವಜಾರೋಹಣ ನೆರವೇರಿಸಿದರು. ಮೇನೇಜ್ ಮೆಂಟ್ ಅಧ್ಯಕ್ಷರಾದ ತಾಜ್ ಮುಹಮ್ಮದ್ ಸಂಪಾಜೆ ಯವರ ಅಧ್ಯಕ್ಷತೆಯಲ್ಲಿ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು. ರೇಂಜ್ ಕಾರ್ಯದರ್ಶಿ ಮುಹಮ್ಮದ್ ನವವಿ ಮುಂಡೋಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇಬ್ರಾಹಿಂ ಹಾಜಿ ಮಂಡೆಕೋಲು ಶುಭ ಹಾರೈಸಿದರು. ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಶಂಸುದ್ದೀನ್ ದಾರಿಮಿ ಮುಖ್ಯ ಅತಿಥಿಗಳಾಗಿದ್ದರು. ಜನರಲ್ ಕನ್ವೀನರ್ ಶಮೀಂ ಅರ್ಶದಿ ಸ್ವಾಗತಿಸಿ ವರ್ಕಿಂಗ್ ಕನ್ವೀನರ್ ಮುಹಿಯುದ್ದೀನ್ ಅನ್ಸಾರಿ ವಂದಿಸಿದರು. ಮೇನೇಜ್ ಮೆಂಟ್ ಕಾರ್ಯದರ್ಶಿ ಯು.ಪಿ.ಬಶೀರ್ ಬೆಳ್ಳಾರೆ, ಕೋಶಾಧಿಕಾರಿ ಅಬ್ದುಲ್ ಹಮೀದ್ ಹಾಜಿ ಸುಳ್ಯ , ಇಕ್ಬಾಲ್ ಸುಣ್ಣ ಮೂಲೆ ಹಸೈನಾರ್ ಧರ್ಮತ್ತಣ್ಣಿ, ಅಬ್ದುಲ್ಲಾ ಮಾರ್ಗ, ಮುಹಮ್ಮದ್ ತೈವಳಪ್ಪ್ , ಖಲೀಲ್ ಸಾಲೆಕ್ಕಾರ್, ಅಬ್ದುಲ್ಲಾ ಎಂ.ಪಿ. ಹುಸೈನಾರ್ .ಜಿ. ಹಾರಿಸ್ ಮಾವಂಜಿ ಮುಂತಾದವರು ಉಪಸ್ಥಿತರಿದ್ದರು.
ಎರಡು ದಿವಸಗಳಲ್ಲಿ ನಡೆದ ಕಾರ್ಯಕ್ರಮದಲ್ಲಿ 29 , ಮದ್ರಸಗಳಿಂದ ಆಗಮಿಸಿದ 530 ರಷ್ಟು ವಿದ್ಯಾರ್ಥಿಗಳು ಸ್ಪರ್ಧಿಸಿದ್ದು 446 ಅಂಕಗಳೊಂದಿಗೆ ಬೆಳ್ಳಾರೆ ಮದ್ರಸ ಚಾಂಪಿಯನ್ ಆಗಿ ಹೊರಹೊಮ್ಮಿತು. ಅಜ್ಜಾವರ ಮದ್ರಸ ರನ್ನರ್ಸಾದರೆ ಬಯಂಬು ಮದ್ರಸ ತೃತೀಯ ಸ್ಥಾನ ಪಡೆಯಿತು. ಸಬ್ ಜೂನಿಯರ್, ಸೂಪರ್ ಸೀನಿಯರ್, ಜನರಲ್, ಅಲುಂನಿ, ಗರ್ಲ್ಸ್ ವಿಭಾಗಗಳಲ್ಲಿ ಬೆಳ್ಳಾರೆ ಮದ್ರಸ ಹಾಗೂ ಕಿಡ್ಡೀಸ್, ಜೂನಿಯರ್, ಸೀನಿಯರ್ ವಿಭಾಗದಲ್ಲಿ ಅಜ್ಜಾವರ ಮದ್ರಸ ಅತಿಹೆಚ್ಚು ಅಂಕ ಗಳಿಸಿತು. ಗರ್ಲ್ಸ್ ವಿಭಾಗದಲ್ಲಿ ಬಯಂಬು ಮದ್ರಸ ದ್ವಿತೀಯ ಸ್ಥಾನ ಪಡೆಯಿತು. ಡಿಸೆಂಬರ್ 28 ರಂದು ದುಗ್ಗಲಡ್ಕದಲ್ಲಿ ನಡೆದ ಮುಅಲ್ಲಿಂ ಫೆಸ್ಟ್ ನಲ್ಲಿ ಬೆಳ್ಳಾರೆ ಚಾಂಪಿಯನ್ ಆದರೆ ಕಲ್ಲುಗುಂಡಿ ಮದ್ರಸ ರನ್ನರ್ಸ್ ಆಗಿ ಹೊರಹೊಮ್ಮಿತು.

ಹುಡುಗರ ವಿಭಾಗದಲ್ಲಿ ಅಫ್ನಾನ್ ಅಜ್ಜಾವರ, ಹುಡುಗಿಯರ ವಿಭಾಗದಲ್ಲಿ ಬಯಂಬು ಮತ್ತು ಮುಅಲ್ಲಿಂ ವಿಭಾಗದಲ್ಲಿ ಶಮೀಂ ಅರ್ಶದಿ ಮಂಡೆಕೋಲು, ಮುಹಮ್ಮದ್ ನವವಿ ಮುಂಡೋಳೆ ಮತ್ತು ತಮೀಂ ಅನ್ಸಾರಿ ಕಲಾ ಪ್ರತಿಭೆಯಾಗಿ ಆಯ್ಕೆಯಾದರು. ಆದಿತ್ಯವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಟ್ರೋಫಿ ಹಾಗೂ ಬಹುಮಾನ ವಿತರಿಸಲಾಯಿತು.

ಅಬೂಬಕ್ಕರ್ ಹಾಜಿ ಮಂಗಳ, ಅಬ್ದುಲ್ ಖಾದರ್ ಹಾಜಿ ಬಯಂಬಾಡಿ, ಅಬ್ದುಲ್ ಖಾದರ್ ಹಾಜಿ ಅಜ್ಜಾವರ, ಶಾಫಿ ಮುಕ್ರಿ, ನಝೀರ್ ಬೆಳ್ಳಾರೆ, ಬಶೀರ್ ಕಲ್ಲಪ್ಪಣೆ, . ಮೀಡಿಯಾ ಕನ್ವೀನರ್ ಅಬ್ಬಾಸ್ ಅನ್ಸಾರಿ, ಹರ್ಷದ್ ಬಾಖವಿ, ನಈಂ ಫೈಝಿ, ರಫೀಕ್ ಹನೀಫಿ, ಉಪಸ್ಥಿತರಿದ್ದರು.