ದ.ಕ ತಮಿಳು ಸೇವಾ ಸಂಘದ ಮಹಾಸಭೆ : ಪದಾಧಿಕಾರಿಗಳ ಆಯ್ಕೆ

0

ದ.ಕ. ತಮಿಳು ಸೇವಾ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಶ್ರೀಧರ ನಾಗಪಟ್ಟಣರ ಅಧ್ಯಕ್ಷತೆಯಲ್ಲಿ ಸಂಘದ ಕಚೇರಿಯಲ್ಲಿ ನಡೆಯಿತು. ವಾರ್ಷಿಕ ವರದಿಯನ್ನು ಅಧ್ಯಕ್ಷರಾದ ಶ್ರೀಧರ್ ನಾಗಪಟ್ಟಣ ಸಭೆಯಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಶರತ್ ಕುಮಾರ್ ನಾಗಪಟ್ಟಣ, ಉಪಾಧ್ಯಕ್ಷರಾಗಿ ಶಿವಬಾಲನ್ ಕೊಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಕಾರ್ತಿಕ್ ಕೂಟೇಲ್, ಕೋಶಾಧಿಕಾರಿಯಾಗಿ ಗಣೇಶ್ ಕೊಡಿಯಾಲ್ ಬೈಲ್, ಗೌರವ ಅಧ್ಯಕ್ಷರಾಗಿ ಚಂದ್ರಲಿಂಗಂ ಬೇಂಗಮಲೆ ಆಯ್ಕೆಯಾದರು.
ಜೊತೆ ಕಾರ್ಯದರ್ಶಿಗಳಾಗಿ ಸಂಜಯ್ ನಾಗಪಟ್ಟಣ, ಪುಷ್ಪರಾಜ್ ನಾಗಪಟ್ಟಣ, ಕಣ್ಣನ್ ಓಟಕಜೆ, ಸತೀಶ್ ಕಲ್ಲುಗುಂಡಿ, ಆನಂದ ಕುಕ್ಕಂದೂರು, ತ್ಯಾಗರಾಜ ಕಡಬ, ಪೂಬಾಲನ್ ಪೆರ್ಲಪಾಂಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ, ಆರಕ್ಷಕ ಉಪನಿರೀಕ್ಷಕರಾದ ವಿಜಯರಾಜ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಗಣಪತಿ ಪ್ರಾಸ್ತಾವಿಕ ಮಾತನಾಡಿದರು. ಪೆರುಮಾಳ್ ಐವರ್ನಾಡು ಸ್ವಾಗತಿಸಿ, ದಯಾಳ್ ಬಾರ್ಪಣೆ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಭಾಗವಹಿಸಿದ್ದರು.