ಇಂದು ಕುತ್ತಮೊಟ್ಟೆ ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದ ವಾರ್ಷಿಕೋತ್ಸವ, ಸಾರ್ವಜನಿಕ ಶ್ರೀ ದುರ್ಗಾಪೂಜೆ

0

ಉಬರಡ್ಕದ ಕುತ್ತಮೊಟ್ಟೆ ಶ್ರೀ ಶಾಸ್ತಾವು ಅಯ್ಯಪ್ಪ ಭಜನಾ ಮಂದಿರದ 32 ನೇ ವಾರ್ಷಿಕೋತ್ಸವ ಮತ್ತು 12 ನೇ ವರ್ಷದ ಸಾರ್ವಜನಿಕ ದುರ್ಗಾಪೂಜೆಯು ಇಂದು ನಡೆಯಲಿದೆ.
ಬೆಳಿಗ್ಗೆ ದೀಪಸ್ಥಾಪನೆ, ಗಣಪತಿಹವನ, ಗೀತ ಜ್ಞಾನ ಯಜ್ಞ ತಂಡ ಬಾಳಿಲ ಇವರಿಂದ ಭಗವದ್ಗೀತೆ ಪಾರಾಯಣ, ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಶ್ರೀ ಉಳ್ಳಾಕುಲು ಭಜನಾ ತಂಡದಿಂದ ಕುಣಿತ ಭಜನೆ ಹಾಗೂ ರಾತ್ರಿ ಸಾರ್ವಜನಿಕ ಶ್ರೀ ದುರ್ಗಾಪೂಜೆ, ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.