ಮುಕ್ಕೂರು ಶಾಲಾ ವಾರ್ಷಿಕೋತ್ಸವ : ಪೂರ್ವಭಾವಿ ಸಭೆ

0

ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿ.22 ರಂದು ನಡೆಯುವ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಅಂತಿಮ ಹಂತದ ಪೂರ್ವಭಾವಿ ಸಭೆಯು ಡಿ.18 ರಂದು ನಡೆಯಿತು.

15 ವರ್ಷಗಳ ಬಳಿಕ ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯಲಿದ್ದು ವ್ಯವಸ್ಥಿತ ರೀತಿಯಲ್ಲಿ ಆಚರಿಸಲು ಆಗಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಊಟ ಉಪಚಾರ, ಅತಿಥಿಗಳಿಗೆ ಸ್ವಾಗತ, ಸಭಾ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆದು ಸಲಹೆ ಸೂಚನೆ ನೀಡಲಾಯಿತು.


ಡಿ.21 ರಂದು ಶಾಲಾ ಪೋಷಕರು, ಹಳೆ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಊರವರನ್ನು ಸೇರಿದಂತೆ ಶಾಲಾಭಿಮಾನಿಗಳ ಉಪಸ್ಥಿತಿಯಲ್ಲಿ ಶ್ರಮದಾನ ನಡೆಸಲು ನಿರ್ಧರಿಸಲಾಯಿತು. ಊರಿನ ಪ್ರತಿಯೋರ್ವರು ಶಾಲೆಯ ಮೇಲಿನ ಪ್ರೀತಿಯಿಂದ ಸ್ವಯಂಪ್ರೇರಿತರಾಗಿ ಆಗಮಿಸಿ ಶ್ರಮದಾನದಲ್ಲಿ ಭಾಗವಹಿಸುವಂತೆ ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಸ್ವಾಗತ ಸಮಿತಿ ಸಂಚಾಲಕರಾದ ಕುಂಬ್ರ ದಯಾಕರ ಆಳ್ವ, ಹೊನ್ನಪ್ಪ ಗೌಡ ಚಾಮುಂಡಿಮೂಲೆ, ಆರ್ಥಿಕ ಸಮಿತಿ ಸಂಚಾಲಕರಾದ ಜಗನ್ನಾಥ ಪೂಜಾರಿ ಮುಕ್ಕೂರು, ಉಮೇಶ್ ಕೆಎಂಬಿ, ವೇದಿಕೆ ಮತ್ತು ಪ್ರಚಾರ ಸಮಿತಿ ಸಂಚಾಲಕರಾಗಿ ಮೋಹನ ಬೈಪಡಿತ್ತಾಯ, ಸುಧಾಕರ ರೈ ಕುಂಜಾಡಿ, ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ಎಂಜಿನಿಯರ್ ನರಸಿಂಹ ತೇಜಸ್ವಿ, ಅಲಂಕಾರ ಸಮಿತಿ ಸಂಚಾಲಕರಾಗಿ ಜಯಂತ ಗೌಡ ಕುಂಡಡ್ಕ, ಸಾಂಸ್ಕೃತಿಕ ಸಮಿತಿ ಸಂಚಾಲಕ ಹಾಗೂ ಶಾಲಾ ಪ್ರಭಾರ ಮುಖ್ಯಗುರು ಅರವಿಂದ ಕಜೆ, ಲಲಿತಾ ಕುಮಾರಿ ಮನವಳಿಕೆ, ಸ್ವಚ್ಛತಾ ಸಮಿತಿ ಸಂಚಾಲಕಿ ಸುಮತಿ ರೈ ಕೊಂಡೆಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.