ಪಯಸ್ವಿನಿ ನದಿಗೆ ಸ್ನಾನಕ್ಕೆ ‌ಬಂದ ಯುವಕ ಕಣ್ಮರೆ : ನೀರಿನಲ್ಲಿ ಶೋಧ

0

ಸುಳ್ಯ ಭಸ್ಮಡ್ಕ ಪಯಸ್ವಿನಿ ನದಿಯಲ್ಲಿ ಸ್ನಾನಕ್ಕೆ ಬಂದ ಮೂವರು ಯುವಕರ ಪೈಕಿ ಒಬ್ಬ ನೀರಿನಲ್ಲಿ ಕಣ್ಮರೆಯಾಗಿದ್ದು, ಯುವಕನಿಗಾಗಿ ನೀರಿನಲ್ಲಿ ಶೋಧ ನಡೆಸಲಾಗುತ್ತಿದೆ. ಇಂದು‌ ಬೆಳಗ್ಗೆ ಮೂವರು ಯುವಕರು ಭಸ್ಮಡ್ಕ ಬಳಿ ಪಯಸ್ವಿನಿ ನದಿಗೆ ಬಂದಿದ್ದರು. ಅದರಲ್ಲಿ ಒಬ್ಬ ಯುವಕ ನೀರಿನಲ್ಲಿ ಮುಳುಗಿರುವುದಾಗಿ ತಿಳಿದು ಬಂದಿದೆ. ಮುಳುಗು ತಜ್ಞರು ಹಾಗೂ ಪೋಲೀಸರು ಸ್ಥಳಕ್ಕೆ ಬಂದಿದ್ದಾರೆ.