ಪತ್ರಕರ್ತರೊಬ್ಬರ ಗಾಂಧಿಗಿರಿ

0

ಸುಳ್ಯದ ಜಟ್ಡಪಳ್ಳದಿಂದ ಕೊಡಿಯಾಲಬೈಲ್ ವರೆಗಿನ ರಸ್ತೆ ತೀರಾ ಹದಗೆಟ್ಡಿದ್ದು, ತಕ್ಷಣ ದುರಸ್ತಿ ಪಡಿಸಬೇಕೆಂದು ಆಗ್ರಹಿಸಿ ರಸ್ತೆಯ ಫಲಾನುಭವಿ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಇಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ನ.ಪಂ.ಮುಖ್ಯಾಧಿಕಾರಿಯವರ ಭರವಸೆ ಮೇರೆಗೆ ಪ್ರತಿಭಟನೆ ಹಿಂತೆಗೆದುಕೊಂಡ ಘಟನೆ ನಡೆದಿದೆ.

ಈ ರಸ್ತೆಯನ್ನು ದುರಸ್ತಿ ಪಡಿಸಬೇಕೆಂದು ಹಲವು ಬಾರಿ ನಾಗರಿಕರು ಮನವಿ ಸಲ್ಲಿಸಿದ್ದರು. ರಿಕ್ಷಾ ಚಾಲಕರು ಕೂಡ ಕಳೆದ ವಾರ ನಗರ ಪಂಚಾಯತ್ ಎದುರು ಪ್ರತಿಭಟನೆ ನಡೆಸಿದ್ದರು. ಪ್ಯಾಚ್ ವರ್ಕ್ ಗೆ ತಂದು ಹಾಕಿದ ಜಲ್ಲಿ ಕೂಡ ಅಲ್ಲಿಂದ ತೆಗೆಯಲಾಗಿತ್ತು.

ಇಂದು ದಿನಕರ ಕಾನತ್ತಿಲರವರ ಅಂಗಡಿಯ ಮುಂಭಾಗದಲ್ಲಿ ಬ್ಯಾನರ್ ಹಾಕಿ ಪ್ರತಿಭಟನೆಗೆ ಕುಳಿತ ಶರೀಫ್ ರವರೊಂದಿಗೆ ಸ್ಥಳೀಯರಾದ ರಾಮಚಂದ್ರ ಪೆಲ್ತಡ್ಕ, ಹರಿಶ್ಚಂದ್ರ ಮೊದಲಾದವರು ಸೇರಿಕೊಂಡರು.

ಅಲ್ಲಿಗೆ ಆಗಮಿಸಿದ ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್ ರವರು ಪ್ರತಿಭಟನೆಗಾರರೊಂದಿಗೆ ಮಾತುಕತೆ ನಡೆಸಿದರು.ಜ.9 ರೊಳಗೆ ಈ ರಸ್ತೆಗೆ ಪ್ಯಾಚ್ ವರ್ಕ್ ಮಾಡಿಕೊಡುತ್ತೇವೆ. ಜನವರಿ ಅಂತ್ಯಕ್ಕೆ ಟೆಂಡರ್ ನಡೆದು ಪೂರ್ಣ ಡಾಮರೀಕರಣ ಮಾಡುತ್ತೇವೆ ಎಂಬ ಭರವಸೆ ನೀಡಿದರು. ಅದರಂತೆ ಪ್ರತಿಭಟನೆ ನಿರತರಾದ ಶರೀಫ್ ಜಟ್ಟಿಪಳ್ಳ ಪ್ರತಿಭಟನೆ ಹಿಂತೆಗೆದುಕೊಂಡರು.