ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಸನ್ನದು ಸ್ವೀಕೃತಿ ದಿನಾಚರಣೆ ಹಾಗೂ ಕುಟುಂಬ ಸಮ್ಮಿಲನ

0

ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಡಿ.31ರಂದು ಸವಣೂರು ಶ್ರಾವಣಿ ಫಾರ್ಮಿನಲ್ಲಿ ಕ್ಲಬ್ ನ ಸನ್ನ ದು ಸ್ವಿಕೃತಿ ದಿನಾಚರಣೆ ಹಾಗೂ ಕುಟುಂಬ ಸಮ್ಮಿಲನ ನಡೆಯಿತು. ಕ್ಲಬ್ಬಿನ ಸದಸ್ಯರಾದ ಲಯನ್ ಶಶಿಧರ ಪಳಂಗಾಯ ಹಾಗೂ ರಶ್ಮಿ ಪಳಂಗಾಯ ಆತಿಥ್ಯ ವಹಿಸಿದರು.

ಲಯನ್ಸ್ ಜಿಲ್ಲಾ ಪೂರ್ವ ರಾಜ್ಯಪಾಲರಾದ ಲಯನ್ ಎಂ.ಬಿ ಸದಾಶಿವ mjf ರವರು ಚಾರ್ಟರ್‌ಗೆ ದೀಪ ಬೆಳಗಿಸಿ ಉದ್ಘಾಟಿಸಿದರು. ಲಯನ್ಸ್ ಸಂಸ್ಥೆಯ ಸೇವಾ ವೈಶಾಲ್ಯತೆಯನ್ನು ಹಾಗೂ ಕೌಟುಂಬಿಕ ಸಮ್ಮೇಳನದ ಅಗತ್ಯತೆಯನ್ನು ಸಭೆಯ ಮುಂದಿರಿಸಿದರು. ಈ ಸಂದರ್ಭದಲ್ಲಿ ಸ್ಥಾಪಕ ಸದಸ್ಯರಾದ ಲಯನ್ ಜಾಕೆ ಮಾಧವ ಗೌಡ mjf, ಲಯನ್ ಲಯನ್ ಬಾಲಕೃಷ್ಣ ಕುದ್ವ, ಲಯನ್ ನಾಗೇಶ್ ಕಿನ್ನಿ ಕುಮ್ರಿ, ಲಯನ್ ಬಾಲೇಶ್ ಪಳಂಗಾಯ, ಲಯನ್ ನೇಮಿರಾಜ್ ಪಲ್ಲೋಡಿ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅತಿಥಿಗಳಾಗಿ ಉಪಸ್ಥಿತರಿದ್ದ ಸುಬ್ರಹ್ಮಣ್ಯ ಕುಕ್ಕೆ, ಲಯನ್ಸ್ ಕ್ಲಬ್ಬಿನ ಅಧ್ಯಕ್ಷರಾದ ಲಯನ್ ರಾಮಚಂದ್ರ ಪಳಂಗಾಯ ಶುಭ ಹಾರೈಸಿದರು, ಲಯನ್ ಮೋಹನ್ ಎ ಣ್ಮೂರು ವೇದಿಕೆಗೆ ಆಹ್ವಾನಿಸಿ, ಲಯನ್ ರಶ್ಮಿ ಪಳಂಗಾಯ ಲಯನ್ಸ್ ಪ್ರಾರ್ಥನೆ ಗೈದು ಲಯನ್ ಸುಶ್ಮಿತಾ ಜಾಕೆ ದ್ವಜ ವಂದನೆಗೈದರು. ಲಯನ್ ದಿಲೀಪ್ ಬಾಬ್ಲು ಬೆಟ್ಟು ಸಭಾಧ್ಯಕ್ಷತೆ ವಹಿಸಿದರು. ಲಯನ್ ಪುರಂದರ ಪನ್ಯಾಡಿ ಪರಿಚಯಿಸಿ ಕಾರ್ಯದರ್ಶಿ ಲಯನ್ ವಾಸುದೇವ ಮೇಲ್ಪಾಡಿ ಧನ್ಯವಾದ ಸಲ್ಲಿಸಿದರು. ಸ್ವಾಗತಿಸಿದ ಲಯನ್ ಶಶಿಧರ್ ಪಳಂಗಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಲಯನ್ ಸಂತೋಷ್ ಜಾಕೆ ಹಾಗೂ ಲಯನ್ ಸುಶ್ಮಿತಾ ಜಾಕೆ ದಂಪತಿಗಳನ್ನು ಕೇಕ್ ಕತ್ತರಿಸಿ ದೀಪ ಬೆಳಗಿಸಿ ಶುಭ ಹಾರೈಸಿ ಸನ್ಮಾನಿಸಲಾಯಿತು.