ಸುಳ್ಯ ಬ್ಯಾನರ್ ಹರಿದ ಪ್ರಕರಣ ಆರೋಪಿಗಳ ಪತ್ತೆಗೆ ಸುಳ್ಯ ನಗರ ಭಜರಂಗದಳ ಆಗ್ರಹ

0

ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠ ಸಲುವಾಗಿ ಸುಳ್ಯ‌ನಗರದಲ್ಲಿ ರಿಕ್ಷಾ ಚಾಲಕರು ಹಾಕಲಾದ ಬ್ಯಾನರ್ ಅನ್ನು ರಾತ್ರಿ ಹೊತ್ತಿನಲ್ಲಿ ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಪೊಲೀಸ್ ಇಲಾಖೆ 24ಗಂಟೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಜ.7ರಂದು ಬೆಳಗ್ಗೆ 10.00ಗೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಮಾಡಲಿದ್ದೇವೆ ಅಲ್ಲದೆ ಸುಳ್ಯದ ಜಾತ್ರೆ ಹಾಗೂ ಹಿಂದು ಜನತೆಯ ಆರಾಧ್ಯ ಶ್ರೀರಾಮ ಮಂದಿರ ಉದ್ಘಾಟನೆ ದಿನಗಣನೆ ಇರುವ ಸಂದರ್ಭದಲ್ಲಿ ಈ ರೀತಿಯ ವಿಕೃತಿ ಮೆರೆದು ಶಾಂತಿ ಭಂಗ ಉಂಟುಮಾಡುಲು ಹೊರಟಿರುವ ದುಷ್ಟ ಶಕ್ತಿಗಳನ್ನು ಪೋಲೀಸ್ ಇಲಾಖೆ ಯಾರ ಒತ್ತಡಗಳಿಗೆ ಮಣಿಯದೆ ಬಂಧಿಸಬೇಕು ಎಂದು
ಬಜರಂಗದಳ ಸುಳ್ಯ ನಗರ ಸಂಚಾಲಕರು ವರ್ಷಿತ್ ಚೊಕ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.