ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹ ಮಿಲನ

0

ಕೊಡಗು ಮತ್ತು ದ.ಕ.ಗೌಡ ಸಮಾಜ ಬೆಂಗಳೂರು ಇದರ ವತಿಯಿಂದ ಜ.07 ರಂದು ” ನಮ್ಮನೆ ” ಸಾಂಸ್ಕೃತಿಕ ಕಲಾ ಕೇಂದ್ರ ಲಗ್ಗೆರೆ, ಬೆಂಗಳೂರಿನಲ್ಲಿ, ಸ್ನೇಹ ಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ದೇವರಗುಂಡ ಸದಾನಂದ ಗೌಡರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ನಂತರ ಅವರು ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ, ಸಭೆಯನ್ನುದ್ದೇಶಿಸಿ ಮಾತನಾಡಿ, ನಮ್ಮ ಸಮುದಾಯ ದೇಶಕ್ಕೆ ಅಭೂತಪೂರ್ವ ಕೊಡುಗೆಯನ್ನು ನೀಡಿದೆ, ನಮ್ಮ ಸಮಾಜದ ಸಂಸ್ಕೃತಿ, ಸಂಸ್ಕಾರ, ಆಚಾರ, ವಿಚಾರಗಳು ಅದ್ಭುತ, ಇವುಗಳನ್ನು ಮುಂದಕ್ಕೆ ಕೊಂಡೊಯ್ಯುವ ಕೆಲಸ ಕಾಯ೯ಗಳು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದಿಂದ ಆಗುತ್ತಿದೆ ಎಂದು ಹೇಳಿದರು. ಮುಖ್ಯ ಅತಿಥಿಗಳಾದ ಪಾಂಶುಪಾಲ ದಾಮೋದರ ಕಣಜಾಲುರವರು ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ನಮ್ಮ ಸಮುದಾಯವು ಮುಖ್ಯ ಪಾತ್ರ ವಹಿಸಿದೆ. ಇಂತಹ ಸಂಘಟನೆಗಳ ಮೂಲಕ ಸಮುದಾಯದ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು. ನಂತರ ಮಾಜಿ ಸಚಿವರು ಹಾಗೂ ಶಾಸಕರಾದ ಮುನಿರತ್ನರವರು ಸಮಾಜದ ಬೆಳವಣಿಗೆಯನ್ನು ಕೊಂಡಾಡಿ ಶುಭ ಹಾರೈಸಿದರು.

ರಾಜ್ಯ ವಾಣಿಜ್ಯ ತೆರಿಗೆ ಅಪರ ಆಯುಕ್ತರಾದ, ಶ್ರೀಮತಿ ಕೆ. ಎಂ. ಸುಲೋಚನಾ ಧನಂಜಯ ಅಡ್ಪಂಗಾಯರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ, ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಿಸೋಣ, ನಮ್ಮ ಸಮಾಜದ ಸಂಸ್ಕೃತಿಯನ್ನು ಉಳಿಸೋಣ ಎಂದು ಹೇಳಿದರು. ರಾಜ್ಯ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಶ್ರೀಮತಿ ಸುಮಿತ ನಿಂಗರಾಜು ನಂಗಾರುರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಸಹಬಾಳ್ವೆ, ಸ್ತ್ರೀಶಕ್ತಿ ಮತ್ತು ಯುವಶಕ್ತಿ ಸಮಾಜದ ಏಳಿಗೆಗೆ ಸಹಕಾರಿ ಎಂದು ಹೇಳಿದರು.

ಸಮಾಜದ ಅಧ್ಯಕ್ಷರಾದ ಪಾಣತ್ತಲೆ ಪಳಂಗಪ್ಪರವರು ಮಾತನಾಡಿ ನಮ್ಮ ಭಾಷೆ, ಸಂಸ್ಕೃತಿ, ಸಂಸ್ಕಾರಗಳನ್ನು ಸಂರಕ್ಷಿಸಬೇಕು ಎಂದರು. ಸಮಾಜದ ಉಪಾಧ್ಯಕ್ಷರಾದ ನಾಗೇಶ್ ಕುಮಾರ್ ಕಲ್ಲುಮುಟ್ಲುರವರು ಅತಿಥಿಗಳನ್ನು, ಸಭಿಕರನ್ನು ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿಗಳಾದ ನಾಗೇಶ್ ಉಳುವಾರು ಬಂಟೋಡಿಯವರು ವಂದನಾರ್ಪಣೆಗೈದರು.

ಸಮಾಜದ ಉಪಾಧ್ಯಕ್ಷರಾದ ನಾಗೇಶ್ ಕುಮಾರ್ ಕಲ್ಲುಮುಟ್ಲು, ಕಾರ್ಯದರ್ಶಿಗಳಾದ ಸೋಮಣ್ಣ ಕುಂಭಗೌಡನ, ಖಜಾಂಜಿಗಳಾದ ರಾಧಾಕೃಷ್ಣ ಗುತ್ತಿಗಾರುಮೂಲೆ, ಮಹಿಳಾ ಘಟಕದ ಅಧ್ಯಕ್ಷೆ ಶಶಿಪ್ರಭಾ ಮಡ್ತಿಲ ಹಾಗೂ ಯುವಘಟಕದ ಅಧ್ಯಕ್ಷರಾದ ದಯಾನಂದ ಕುಂಬ್ಲಾಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಭೂಮಿಕ ಉಳುವಾರು ಬಂಟೋಡಿ ಹಾಗೂ ತಂಡದವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಶ್ರೀಮತಿ ಲೀಲಾ ಸೋಮಣ್ಣ ಕುಂಭಗೌಡನ ಹಾಗೂ ವಿನೋದ್ ಮೂಡಗದ್ದೆಯವರು ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಾಜದ ಕುಲಬಾಂಧವರಿಗೆ ರುಚಿಕರವಾದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ಮಧ್ಯಾಹ್ನದ ನಂತರ ನಡೆದ ಮನೋರಂಜನಾ ಕಾರ್ಯಕ್ರಮದಲ್ಲಿ ಮಕ್ಕಳು, ಯುವಘಟಕ ಹಾಗೂ ಮಹಿಳಾ ಘಟಕದ ಸದಸ್ಯರು ಭಾಗವಹಿಸಿದ್ದರು.