ಜ.15: ಪಂಜದ ನೆಕ್ಕಿಲ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ

0

ಪಂಜದ ನೆಕ್ಕಿಲ ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ನೇಮೋತ್ಸವವು.ಜ.15 ರಂದು ನಡೆಯಲಿದೆ.

ಜ.15 ರಂದು ಬೆಳಿಗ್ಗೆ ಗಂಟೆ 8 ರಿಂದ ಶ್ರೀ ವಾಸುಕಿ ನಾಗರಾಜ ದೇವರ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ, ನವಕ ಕಲಶ, ಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ, ಶ್ರೀ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ಸ್ವಸ್ತಿ ಪುಣ್ಯಾ ಹವಾಚನ ವಾಚನ, ಗಣಪತಿ ಹೋಮ, ನವಕ ಕಲಶ, ಕಲಶಾಭಿಷೇಕ , ತಂಬಿಲಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 4ಕ್ಕೆ ದೈವಗಳಿಗೆ ತಂಬಿಲ ಹಾಗೂ ಭಂಡಾರ ತೆಗೆಯುವುದು. ರಾತ್ರಿ ಗಂಟೆ 7ರಿಂದ ಶ್ರೀ ರಕ್ತೇಶ್ವರಿ ದೈವದ ನೇಮ -ಬಟ್ಟಲು ಕಾಣಿಕೆ , ರಾತ್ರಿ ಗಂಟೆ 9 ರಿಂದ ವರ್ಣರಪಂಜುರ್ಲಿ ಹಾಗೂ ಗುಳಿಗ ದೈವದ ನೇಮೋತ್ಸವ, ರಾತ್ರಿ ಗಂಟೆ 9.30 ರಿಂದ ಅನ್ನಸಂತರ್ಪಣೆ ನಡೆಯಲಿದೆ.