ಕಾಳಮ್ಮನೆ ಬಳಿ ದ್ವಿಚಕ್ರ ವಾಹನಗಳೆರಡು ಪರಸ್ಪರ ಅಪಘಾತ- ಸಣ್ಣಪುಟ್ಟ ಗಾಯಗಳೊಂದಿಗೆ ಸವಾರರು ಪಾರು

0

ಜಾಲ್ಸುರು ಗ್ರಾಮದ ಕಾಳಮ್ಮನೆ ಬಳಿ ಆಕ್ಟಿವಾ ಹಾಗೂ ಬೈಕ್ ಪರಸ್ಪರ ಗುದ್ದಿ ಅಪಘಾತವಾಗಿ ಎರಡು ವಾಹನಗಳ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಜ.24 ರಂದು ಬೆಳಗ್ಗೆ ಸಂಭವಿಸಿದೆ.

ಕಾಳಮ್ಮನೆ ಜೆ.ಕೆ ಜಯಂತ ಗೌಡರ ಮನೆಯ ಮುಂಭಾಗ ಈ ಘಟನೆ ಸಂಭವಿಸಿದ್ದು, ಜಯಂತ ಗೌಡರ ಸಹೋದರ ಜೆ.ಕೆ ರಮೇಶ್ ಗೌಡರು ಸಹೋದರನ ಮನೆಗೆ ತನ್ನ ಆಕ್ಟಿವಾ ತಿರುಗಿಸುವ ಸಂದರ್ಭದಲ್ಲಿ ಸುಳ್ಯ ಕಡೆಯಿಂದ ಉಜಿರೆಗೆ ತೆರಳುತ್ತಿದ್ದ ಸುಳ್ಯ ಮೂಲದ ಬೈಕ್ ಸವಾರನ ಬೈಕ್ ಆಕ್ಟಿವಾಕ್ಕೆ ಡಿಕ್ಕಿಯಾಯಿತು.
ಬೈಕ್ ಸವಾರನ ಅತಿ ವೇಗದ ಚಾಲನೆ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಸವಾರನನ್ನು ತರಾಟೆಗೆ ತೆಗೆದುಕೊಂಡರು.

ಸಣ್ಣಪುಟ್ಟ ಗಾಯಗಳೊಂದಿಗೆ ಗಾಯಗೊಂಡ ದ್ವಿಚಕ್ರ ವಾಹನ ಸವಾರರು ಪ್ರಕರಣವನ್ನು ರಾಜಿ ಮೂಲಕ ಇತ್ಯರ್ಥಪಡಿಸಿದರು.