ಆಲೆಟ್ಟಿ: ಗುಂಡ್ಯ ಐತ್ತಪ್ಪ ಗೌಡರ ಮನೆಯ ಮೇಲೆ ಮರ ಬಿದ್ದು ಹಾನಿ

0

ಆಲೆಟ್ಟಿ ಗುಂಡ್ಯ ಐತ್ತಪ್ಪ ಗೌಡ ರವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿರುವ ಘಟನೆ ಇದೀಗ ವರದಿಯಾಗಿದೆ.

ಮನೆಯ ಮೇಲೆ ಗುಡ್ಡವಿದ್ದು ಗೇರು ಬೀಜದ ಮರ ಬುಡ ಸಮೇತ ಬಿದ್ದ ಪರಿಣಾಮ ‌ಹಾನಿ ಸಂಭವಿಸಿದೆ. ಮೇಲ್ಛಾವಣಿಯ ಹೆಂಚು ಹುಡಿಯಾಗಿ ಗೋಡೆಯು ಬಿರುಕು ಬಿಟ್ಟಿದೆ. ಮನೆಯ ಒಳಗಡೆ ಇದ್ದವರು ಮರ ಮುರಿದು ಬೀಳುವ
ಸದ್ದು ಕೇಳಿ ಹೊರ ಬಂದಿದ್ದುದರಿಂದ ಪ್ರಾಣಾಪಯದಿಂದ ಪಾರಾಗಿದ್ದಾರೆ.