ಜ.31: ಪುತ್ತೂರು ಕೆಎಸ್‌ಆರ್‌ಟಿಸಿ ಘಟಕದ ಹಿರಿಯ ಚಾಲಕ ಬಿ. ರಾಮಕೃಷ್ಣ ಭಟ್ ಕರ್ತವ್ಯದಿಂದ ನಿವೃತ್ತಿ

0

ಪುತ್ತೂರು: ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಚಾಲಕ ಬಿ. ರಾಮಕೃಷ್ಣ ಭಟ್ ಜ.31ರಂದು ಕರ್ತವ್ಯದಿಂದ ನಿವೃತ್ತಿ ಹೊಂದಲಿದ್ದಾರೆ. 1994ರಲ್ಲಿ ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದಲ್ಲಿ ಚಾಲಕರಾಗಿ ಕರ್ತವ್ಯಕ್ಕೆ ಸೇರಿದ ಇವರು 2023ರಲ್ಲಿ ಹಿರಿಯ ಚಾಲಕರಾಗಿ ಭಡ್ತಿಗೊಂಡು ಒಟ್ಟು 29ವರ್ಷ ಸೇವೆ ಸಲ್ಲಿಸಿ ಕರ್ತವ್ಯದಿಂದ ನಿವೃತ್ತಿ ಹೊಂದುತ್ತಿದ್ದಾರೆ. 2008ರಲ್ಲಿ ಉತ್ತಮ ಕಾರ್ಯನಿರ್ವಹಣೆಗೆ ಇವರು ಬೆಳ್ಳಿಪದಕ ಪಡೆದಿದ್ದರು. ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆ ಗ್ರಾಮದ ಬೊಳ್ಳಾಜೆ ನಿವಾಸಿಯಾಗಿರುವ ಇವರು ಪತ್ನಿ ಜಯಲಕ್ಷ್ಮಿ, ಪುತ್ರಿ ಶ್ರೀಮತಿ ವಿಜಯಶ್ರೀ ಹರೀಶ್ ಮತ್ತು ಪುತ್ರ ವಿಘ್ನೇಶ್‌ರವರೊಂದಿಗೆ ಪ್ರಸ್ತುತ ಉಡುಪಿಯ ಹೆರ್ಗದಲ್ಲಿ ವಾಸವಾಗಿದ್ದಾರೆ.