ಉಬರಡ್ಕದ ಡಾ. ಪ್ರಶಾಂತಿ ಶಶಿಕಾಂತ್ ರವರಿಗೆ “ಟಾಪ್ 100 ಪ್ರಿನ್ಸಿಪಾಲ್ ” ಪ್ರಶಸ್ತಿ

0

ALLEN ಗ್ಲೋಬಲ್ ಸ್ಟಡೀಸ್ ವಿಭಾಗ ಮತ್ತು ಏಕ್ ಉಪ್ದೇಶ್ ಮಾಧ್ಯಮದಿಂದ ಫೆ.3ರಂದು ಬೆಂಗಳೂರಿನ ಚಾನ್ಸೆರಿ ಪೆವಿಲಿಯನ್ ಹೋಟೆಲ್ ನಲ್ಲಿ ನಡೆದ ಎಕ್ಸಲೆನ್ಸ್ ಸಮಾವೇಶದಲ್ಲಿ ಉಬರಡ್ಕದ ಡಾ.ಪ್ರಶಾಂತಿ ಶಶಿಕಾಂತ್ ಅವರು “ಟಾಪ್ 100 ಪ್ರಿನ್ಸಿಪಾಲ್ ” ಪ್ರಶಸ್ತಿಯನ್ನು ಸ್ವೀಕರಿಸಿದರು.

ಇವರು ಉಬರಡ್ಕ ಮಿತ್ತೂರು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ನ ನಿವೃತ್ತ ಸಹಾಯಕ ನಿರ್ವಹಣಾಧಿಕಾರಿ ಬಿ. ರಾಘವ ಮತ್ತು ನಾಗವೇಣಿ ದಂಪತಿಯ ಪುತ್ರಿ.

ಇವರು ಪ್ರಸ್ತುತ ಬೆಂಗಳೂರಿನ ಝೆನ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.