ಮಡಿಕೇರಿ ಅಕ್ರಮ ಸಕ್ರಮ ಸಮಿತಿ ಸದಸ್ಯರಾಗಿ ತುಳಸಿ ಗಾಂಧಿಪ್ರಸಾದ್ ನೇಮಕ

0

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕಿನ ನೂತನ ಅಕ್ರಮ ಸಕ್ರಮ ಸಮಿತಿಗೆ ಪೆರಾಜೆ ಬಂಗಾರಕೋಡಿಯ ತುಳಸಿ ಗಾಂಧಿ ಪ್ರಸಾದ್ ಅವರು ನೇಮಕಗೊಂಡಿದ್ದಾರೆ.

ಪೆರಾಜೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಏಕೈಕ ಕಾಂಗ್ರೆಸ್ ನಿದೇರ್ಶಕರಾಗಿ , ಪೆರಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಕಾಂಗ್ರೆಸ್ ಧುರೀಣರಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದ ದಿ. ಗಾಂಧಿಪ್ರಸಾದ್ ಅವರ ಅಗಲಿಕೆ ನಂತರ ತುಳಸಿಯವರು ರಾಜಕೀಯ ಹಾಗೂ ಸಾಮಾಜಿಕ ರಂಗಕ್ಕೆ ಧುಮುಕಿದ್ದರು.

ಇತ್ತೀಚೆಗೆ ನಡೆದ ಪೆರಾಜೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ವಿರಾಜಪೇಟೆ ಶಾಸಕ ಪೊನ್ನಣ್ಣ ರವರ ಶಿಫಾರಸ್ಸು ಪ್ರಕಾರ ಇವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.