ಸುಬ್ರಹ್ಮಣ್ಯ ಗ್ರಾ.ಪಂ ಎದುರು ಸುಬ್ರಹ್ಮಣ್ಯ ಕ್ರಾಂಗ್ರೆಸ್ ವತಿಯಿಂದ ಪ್ರತಿಭಟನೆ

0

ಸುಬ್ರಹ್ಮಣ್ಯ ಗ್ರಾ.ಪಂ. ಮತ್ತು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಭಿವೃದ್ಧಿ ಕುಂಠಿತದ ಆರೋಪ

ಸುಬ್ರಹ್ಮಣ್ಯದ ಗ್ರಾ.ಪಂ. ಮುಂಬಾಗದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾ ಗಿರುವುದಾಗಿ ಆರೋಪಿಸಿ ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.

ಏನೆಕಲ್ಲಿನಿಂದ ವಾಹನ ಜಾಥದಲ್ಲಿ ಬಂದು ಗ್ರಾ.ಪಂ ಪ್ರತಿಭಟನೆ ನಡೆಸಲಾಯಿತು.
ಸುಬ್ರಹ್ಮಣ್ಯ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ , ಕಾಂಗ್ರೆಸ್ ಮುಖಂಡರುಗಳಾದ ಶಿವರಾಮ ರೈ, ಕೃಷ್ಣಮೂರ್ತಿ ಭಟ್, ಪಿ ಎಸ್ ಕಾರ್ಯಪ್ಪ, ಅಶೋಕ್ ನೆಕ್ರಾಜೆ, ಬಾಲಕೃಷ್ಣ ಮರಿಲ್, ಸತೀಶ್ ಕೂಜುಗೋಡು , ರವೀಂದ್ರ ಕುಮಾರ್ ರುದ್ರಪಾದ, ಪವನ್ ಎಂ ಡಿ, ಗುಣವರ್ಧನ ಕೆದಿಲ, ಶೇಷಕುಮಾರ ಶೆಟ್ಟಿ, ವಿಮಲಾ ರಂಗಯ್ಯ, ಲಕ್ಷ್ಮಿ, ಮುಂತಾದವರು ಉಪಸ್ಥಿತರಿದ್ದರು.

ಕೊನೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಉಸ್ತುವಾರಿ ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಚೆನ್ನಪ್ಪ ಗೌಡ ಕಜೆಮೂಲೆ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.