ಮಾ.3: ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದಲ್ಲಿ 30ನೇ ವರ್ಷದ ಏಕಹಾ ಭಜನೆ

0

ಜಾಲ್ಸೂರು ಗ್ರಾಮದ ಸೋಣಂಗೇರಿಯ
ಶ್ರೀಕೃಷ್ಣ ಭಜನಾ ಮಂದಿರದಲ್ಲಿ 30ನೇ ವರ್ಷದ ಏಕಹಾ ಭಜನೆಯು ಮಾ.3ರಂದು ಪ್ರಾತ:ಕಾಲದಿಂದ ಮಾ.4ರಂದು ಪ್ರಾತ:ಕಾಲದವರೆಗೆ ಜರುಗಲಿದೆ.

ಏಕಹಾ ಭಜನೆಯ ಪ್ರಯುಕ್ತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಮತ್ತು ವೈದಿಕ ಕಾರ್ಯಕ್ರಮಗಳು ನಡೆಯಲಿದೆ.
ಮಾ. 3ರಂದು ಬೆಳಗ್ಗೆ ಗಣಹೋಮ, ಸಾರ್ವಜನಿಕ ಲಕ್ಷ್ಮೀಸಹಿತ ಸತ್ಯನಾರಾಯಣ ದೇವರ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಸೋಣಂಗೇರಿ ಪೇಟೆಯಲ್ಲಿ ಸ್ಥಳೀಯ ಹಾಗೂ ಆಹ್ವಾನಿತ ಕುಣಿತ ಭಜನಾ ತಂಡಗಳಿಂದ ಮೆರವಣಿಗೆ, ಸೋಣಂಗೇರಿ ಶಾಲಾ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ದುಗ್ಗಲಾಯ ಮಕ್ಕಳ ಯಕ್ಷ ಕಲಾ ಸಂಘ,ದುಗ್ಗಲಡ್ಕ ಇವರಿಂದ ಬಾಲಕೃಷ್ಣ ನಾಯರ್ ನೀರಬಿದಿರೆಯವರ ನಿರ್ದೇಶನದ ಶ್ರೀಕೃಷ್ಣ ಲೀಲೆ ಕಂಸವಧೆ ಯಕ್ಷಗಾನ ನಡೆಯಲಿದೆ.