ಫೆ‌20 ರಂದು ಸಾಲಮನ್ನಾ ವಂಚಿತ ರೈತರ ಪರವಾಗಿ ಪ್ರತಿಭಟನೆ

0

ಮಲೆನಾಡು ಜನಹಿತ ರಕ್ಷಣಾ ವೇದಿಕೆಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ

ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಸಾಲಮನ್ನಾ ವಂಚಿತ ರೈತರ ರೈತರ ಪರವಾಗಿ ಬೃಹತ್‌ ಪ್ರತಿಭಟನೆ ಫೆ.20 ರಂದು ಬೆಳಗ್ಗೆ 11.00 ಪುತ್ತೂರು ಎ. ಸಿ. ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಮಲೆನಾಡು ಹಿತ ರಕ್ಷಣಾ ವೇದಿಕೆ ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದೆ.

ಈ ಬಗ್ಗೆ ಮಾತನಾಡಿರುವ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು
ಕರ್ನಾಟಕ ಸರಕಾರದಿಂದ 2018ರ ಸಹಕಾರಿ ಸಂಘ (ಸೊಸೈಟಿ ಬ್ಯಾಂಕ್) ಸಾಲಮನ್ನಾ ಪರಿಹಾರದ ಮೊಬಲಗು ದೊರಕದ ರೈತರ ಪರವಾಗಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಘಟನೆಯು ಪ್ರಜಾಪ್ರಭುತ್ವದ ವ್ಯವಸ್ಥೆಯಡಿಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ. ಇವತ್ತು ಆಧುನಿಕ ತಂತ್ರಜ್ಞಾನ ಇಷ್ಟು ಮುಂದುವರಿದರೂ ಸರಕಾರದ ಸಾಲಮನ್ನಾ ಯೋಜನೆಗಳು ಮತ್ತು ಇನ್ನಿತರ ಯೋಜನೆಗಳು ಅರ್ಹತೆ ಇರುವ ರೈತರಿಗೆ ಸಿಗದಿರುವುದು ಈ ರಾಜ್ಯದ ರೈತರ ವಿಪರ್ಯಾಸ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಮತ್ತು ಸಾಲಮನ್ನಾ ವಂಚಿತ ರೈತರಿಗೆ ಸಾಲಮನ್ನಾದ 1 ಲಕ್ಷ ಹಣ ಸಿಗುವ ತನಕ ನಮ್ಮ ಈ ಹೋರಾಟ ಮುಂದುವರೆಯಲಿದೆ.


ಎಂದು ಅವರು ತಿಳಿಸಿದರು. ರೈತಾಪಿ ವರ್ಗದವರಾದ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸರಕಾರವನ್ನು ಒತ್ತಾಯಿಸಿ, ಸಾಲ ವಂಚಿತ ರೈತರಿಗೆ ಸಾಲಮನ್ನಾ ಸಿಗುವ ಹಾಗೆ ಮಾಡುವಲ್ಲಿ ರೈತರು ನಮ್ಮೊಂದಿಗೆ ಸೇರಿಕೊಳ್ಳಬೇಕಾಗಿ ಕೇಳಿಕೊಂಡರು.

ಪತ್ರಿಕಾ ಗೋಷ್ಠಿಯಲ್ಲಿ ಸಾಲಮನ್ನಾ ವಂಚಿತರ ಹೋರಾಟ ಸಮಿತಿ ಸಂಚಾಲಕರಾದ ಜಯಪ್ರಕಾಶ್ ಕೂಜುಗೋಡು,
ಮೋಹನ್ ಕೆದಿಲ, ರಮೇಶ್, ಹೂವಯ್ಯ ಕಲ್ಲೇರಿ, ಪ್ರವೀಣ್ ಕೋನಡ್ಕ, ಮುತ್ತಪ್ಪ ಗೌಡ,ಲಿಂಗಪ್ಪ ಗೌಡ, ನರೇಂದ್ರ ಕೂಜುಗೋಡು, ರಮೇಶ್ ಕೋನಡ್ಕ ಮತ್ತಿತರರು ಉಪಸ್ಥಿತರಿದ್ದರು.