ಬಾಳಪ್ಪ ನಾಯ್ಕ ಎಣ್ಮೂರು ಕುಕ್ಕಾಯಕೋಡಿ ನಿಧನ

0

ಎಣ್ಮೂರು ಗ್ರಾಮದ ಕುಕ್ಕಾಯಕೋಡಿ ಬಾಳಪ್ಪ ನಾಯ್ಕರು ದೇರಳಕಟ್ಟೆ ಕೆ.ಎಸ್ ಹೆಗ್ಗಡೆ ಆಸ್ಪತ್ರೆಯಲ್ಲಿ ಫೆ. 14 ರಂದು ನಿಧನರಾದರು. ಮೆದುಳಿನ ರಕ್ತಸ್ರಾವದಿಂದ ಅಸೌಖ್ಯಗೊಳಗಾಗಿದ್ದ ಅವರನ್ನು ಕಾಣಿಯೂರು – ಪುತ್ತೂರು ಆಸ್ಪತ್ರೆಗಳಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.

ಅವರಿಗೆ 76 ವರ್ಷ ವಯಸ್ಸಾಗಿತ್ತು. ಕೂಲಿ ಕಾರ್ಮಿಕರಾಗಿದ್ದ ಅವರು ಗೊಂದೋಳು ಪೂಜೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.


ಮೃತರು ಪತ್ನಿ ಪಾರ್ವತಿ , ಪುತ್ರರಾದ ಶ್ರೀಧರ, ಹರೀಶ್, ಪುತ್ರಿಯರಾದ ಹರಿಣಾಕ್ಷಿ, ವಿಶ್ವನಾಥ ಅಜಿಲ್ತಡ್ಕ, ಯಮುನ ವಸಂತ ನಾಗನಮಜಲು ಪಾಲ್ತಾಡು, ಸೊಸೆಯಂದಿರಾದ ಶಾಲಿನಿ ಶ್ರೀಧರ್, ಪೂರ್ಣಿಮಾ ಹರೀಶ್, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.