ಹರಿಹರ ಪಲ್ಲತ್ತಡ್ಕ: ಶ್ರೀ ಉಳ್ಳಾಕುಲು ಸಹ ಪರಿವಾರ ದೈವಗಳ ನೇಮೋತ್ಸವ

0

ಹರಿಹರ ಪಲ್ಲತಡ್ಕ ಹರಿಹರೇಶ್ವರ ದೇವರ ಜಾತ್ರೋತ್ಸವದ ಪ್ರಯುಕ್ತ ಶ್ರೀ ಉಳ್ಳಾಕುಲು ಸಹ ಪರಿವಾರ ದೈವಗಳ ನೇಮೋತ್ಸವ ಇಂದು ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ, ಅಭಿವೃದ್ಧಿ ಸಮಿತಿ ಹಾಗೂ ಜಾತ್ರೋತ್ಸವದ ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸಿತರಿದ್ದರು.

ವರ್ಷಪ್ರತಿಯಂತೆ ಈ ವರ್ಷ ಕೂಡ ಹೋಟೆಲ್ ರಾಮಕೃಷ್ಣ ಇದರ ಮಾಲಕರಾದ ರಾಮಕೃಷ್ಣ ಗೌಡ ಕುದ್ಕುಳಿಯವರು ಆಗಮಿಸಿದ ಭಕ್ತಾದಿಗಳಿಗೆ ಉಚಿತ ಪಾನೀಯದ ವ್ಯವಸ್ಥೆಯನ್ನು ನೀಡಿದರು.

ಊರಿನ ಹಾಗೂ ಪರ ಊರಿನ ಭಕ್ತಾದಿಗಳು ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.

(ಚಿತ್ರ : ವರದಿ ಡಿ. ಎಚ್.)