ಮಿಸ್ ವರ್ಲ್ಡ್ ಇಂಟರ್‌ನ್ಯಾಷನಲ್ ಇಂಡಿಯಾ-2024 ಸ್ಮರ್ಧೆಯಲ್ಲಿ ಸಾಯಿಶ್ರುತಿ ಪಿಲಿಕಜೆ ಸೆಕೆಂಡ್ ರನ್ನರ್ ಆಫ್

0

ಯಶ್ ಇಂಟರ್‌ನ್ಯಾಷನಲ್ ಫ್ಯಾಶನ್ ವರ್ಲ್ಡ್ ನವರು ಹೈದರಬಾದ್‌ನಲ್ಲಿ ಫೆ.24ರಂದು ಅಯೋಜಿಸಿದ ಸೌಂದರ್ಯ ಸ್ಪರ್ಧೆಯಲ್ಲಿ ಧ್ವನಿ ಮಾಯೆ ಕಲಾವಿದೆ ಸಾಯಿಶ್ರುತಿ ಪಿಲಿಕಜೆ ಸೆಕೆಂಡ್ ರನ್ನರ್ ಆಫ್ ಆಗಿ ಹೊರಹೊಮ್ಮಿದ್ದಾರೆ.

ಈ ಸ್ಪರ್ಧೆಗೆ ಬೇರೆ ರಾಜ್ಯದಿಂದ ಕೂಡ ಹಲವು ಸ್ಪರ್ಧಿಗಳು ಆಗಮಿಸಿದ್ದರು. ಬೇರೆ ಬೇರೆ ವಿಭಾಗದಲ್ಲಿ ಸ್ಪರ್ಧೆ ನಡೆದಿದ್ದು, ಸಾಯಿಶ್ರುತಿಯವರು ಒಟ್ಟು 38ಕ್ಕಿಂತ ಹೆಚ್ಚು ಸ್ಮರ್ಧಿಗಳನ್ನು ಹಿಂದಿಕ್ಕಿ 10 ಜನರ ಅಂತಿಮ ವಿಭಾಗದಲ್ಲಿ Miss World International India -2024 ರಲ್ಲಿ ಸೆಕೆಂಡ್ ರನ್ನರ್ ಆಫ್ ಆಗಿದ್ದಾರೆ. ಇದರೊಂದಿಗೆ Perfect Body ಟೈಟಲ್ ವಿಜೇತರಾಗಿದ್ದಾರೆ.

ಇವರು ಸುಳ್ಯ ತಾಲೂಕಿನ ಅಮರಮುಡ್ನೂರು ಪಿಲಿಕಜೆ ಶಿವಸಾಯಿ ಭಟ್ ಹಾಗೂ ಸುಜ್ಯೋತಿ ದಂಪತಿಗಳ ಪುತ್ರಿ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ.