ಕಲ್ಲುಗುಂಡಿ ನೂತನ “ಸಮುದ್ರ ಕೇರಳ ಫಿಶ್ ಸೆಂಟರ್ “ಶುಭಾರಂಭ

0

ಕಲ್ಲುಗುಂಡಿಯ ಮುಖ್ಯ ರಸ್ತೆಯ ಮೀನು ಮಾರುಕಟ್ಟೆಯಲ್ಲಿ ನೂತನ” ಸಮುದ್ರ ಕೇರಳ ಫಿಶ್ ಸೆಂಟರ್ ” ಇಂದು ಮಾ. 1 ಶುಭಾರಂಭಗೊಂಡಿದೆ.

ಕಲ್ಲುಗುಂಡಿ ಪೂರ್ಣಿಮಾ ಟೆಕ್ಸ್ ಟೇಲ್ಸ್ ಮಾಲಕ ಪದ್ಮಯ್ಯ ಬಿ. ಆರ್ ರಿಬ್ಬನ್ ಕಟ್ ಮಾಡಿ ಉದ್ಘಾಟಿಸಿದರು. ಸಮುದ್ರ ಫಿಶ್ ಸೆಂಟರ್ ಮಾಲೀಕರಾದ ದುರ್ಗಾ ಪ್ರಸಾದ್ ದೇವರಗುಂಡ, ಮತ್ತು ಮೋಹನ್ ಕುಮಾರ್ ಪೆರುಂಗೋಡಿ ದೀಪ ಬೆಳಗಿಸಿದರು.

ಮುಖ್ಯ ಅತಿಥಿಗಳಾಗಿ ನವಮಿ ಸ್ಟೋರ್ ಮಾಲೀಕ ಯು. ಬಿ. ಚಕ್ರಪಾಣಿ , ಬಿಜೆಪಿ ಮಾಜಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿ ವೇಲ್,ಸಂಪಾಜೆ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ ಹಮೀದ್, ನಿಕೇಶ್ ಉಬರಡ್ಕ, ಸಲೀಂ ಕೊಯನಾಡು, ಗುರು ಪ್ರಸಾದ್, ಹನಿಯಪ್ಪ, ಶಾಜಿ, ಮಮ್ಮುಟ್ಟಿ ಅಶ್ರಪ್, ಲಿಶಾಂತ್, ಸುರೇಶ್ ಸಂಪಾಜೆ , ರಹೀಂ ಕೊಪ್ಪ ಮತ್ತಿತರು ಉಪಸ್ಥಿತರಿದ್ದರು.

ಹಾಗೂ ನಮ್ಮಲ್ಲಿ ಕೇರಳದ ಕಣ್ಣೂರು , ತಲಶೇರಿಯಿಂದ ಉತ್ತಮ ಗುಣಮಟ್ಟದ ಮೀನು ತರಲಾಗುತ್ತಿದ್ದು, ರಖಂ ಚಿಲ್ಲರೆ ದರದಲ್ಲಿ ಹಸಿ ಮೀನು ಮತ್ತು ಒಣಮೀನು ದೊರೆಯುತ್ತದೆ. ಹಾಗೂ ಶುಭಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ಮತ್ತು 3 ಕಿಮೀ ವ್ಯಾಪಿಯೊಳಗೆ ಫ್ರೀ ಡೆಲಿವರಿ ಮಾಡಿಕೊಡಲಾಗುವುದು ಫಿಶ್ ಸೆಂಟರ್ ಮಾಲೀಕ ದುರ್ಗಾ ಪ್ರಸಾದ್ ದೇವರಗುಂಡ , ಮೋಹನ್ ಕುಮಾರ್ ಪೆರುಂಗೋಡಿ,ತಿಳಿಸಿದ್ದಾರೆ.