ಮಾ.9 – 10: ಗೂನಡ್ಕ ದೊಡ್ಡಡ್ಕ – ರಾಜಾರಾಂಪುರದಲ್ಲಿ 43ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕ – ದೊಡ್ಡಡ್ಕ ರಾಜಾರಾಂಪುರದಲ್ಲಿ 43ನೇ ವರ್ಷದ ಶ್ರೀ ಆದಿಬ್ರಹ್ಮ ಮೊಗೇರ್ಕಳ ನೇಮೋತ್ಸವ ಹಾಗೂ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಮಾ.9 ಮತ್ತು 10ರಂದು ನಡೆಯಲಿದೆ.

ಮಾ.9ರಂದು ಬೆಳಿಗ್ಗೆ ಸ್ಥಳ ಶುದ್ಧೀಕರಣ, ಐದು ತಂಡಗಳಿಂದ ಭಜನಾ ಕಾರ್ಯಕ್ರಮ, ಅಪರಾಹ್ನ ಮಂತ್ರಮೂರ್ತಿ ಗುಳಿಗ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ ಬಳಿಕ ಶ್ರೀ ಮೊಗೇರ್ಕಳ ದೈವದ ಗರಡಿ ಇಳಿಯುವುದು, ಮಧ್ಯರಾತ್ರಿ ಮಾಯೆದ ದೇವಿ ತನ್ನಿಮಾನಿ ಗರಡಿ ಇಳಿಯುವುದು, ಬಟ್ಟಲುಕಾಣಿಕೆ, ಬಳಿಕ ಹೂವಿನ ಹಾರ ಅರ್ಪಣೆ, ಮೊಗೇರ ಪೂಜಾರಿಗಳ ದರ್ಶನ ಸವಾರಿ, ಹರಿಕೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

ಮಾ.10ರಂದು ಬೆಳಿಗ್ಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಹಣ್ಣುಕಾಯಿ ಪ್ರಸಾದ ವಿತರಣೆ ಜರುಗಲಿದೆ.