ಶಾಲೆಯಲ್ಲಿ ತಿಳಿದುಕೊಳ್ಳಿ, ಮನೆಯಲ್ಲಿ ಕಲಿತುಕೊಳ್ಳಿ, ಪ್ರಶ್ನಿಸಿ ದೃಢಪಡಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಿ: ಡಾ. ದಾಮ್ಲೆ

0

“ಕುತೂಹಲದಿಂದ ಕಲಿಯುವ ಶ್ರದ್ಧೆ ನಿರಂತರವಾಗಿ ನಮ್ಮಲ್ಲಿ ಇರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಅನ್ವೇಷಣೆಗಳನ್ನು ಅನುಷ್ಠಾನಕ್ಕೆ ತಂದಾಗ ಸದುಪಯೋಗ ಮಾಡಿಕೊಳ್ಳುತ್ತಾ ನಮ್ಮ ಏಳಿಗೆಗಾಗಿ ಬಳಸಿಕೊಂಡಾಗ ನಿಶ್ಚಿತ ಗುರಿಯನ್ನು ತಲುಪಲು ಸಾಧ್ಯ” ಎಂದು ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಯವರು ಹೇಳಿದರು.

ಇವರು ಮಾ.3ರಂದು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಹತ್ತನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಇವರು ಮಾತನಾಡಿ “ನಮ್ಮ ಕೆಲಸದಲ್ಲಿ ನಿರಂತರತೆ ಇರದಿದ್ದರೆ ನಮ್ಮ ಕೆಲಸ ಮರೆತು ಹೋಗಬಹುದು. ನಮ್ಮಲ್ಲಿರುವ ಜಾಡ್ಯವನ್ನು ಬಿಡಬೇಕು. ಕಲಿಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕು. ಕಲಿಯುವ ವಿಷಯದಲ್ಲಿ ಎಲ್ಲರೂ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು” ಎಂದರು.
ಹತ್ತನೇ ತರಗತಿಯ ತರಗತಿ ಶಿಕ್ಷಕಿ ಶ್ರೀಮತಿ ಸವಿತಾ ಎಂ. ಇವರು ಮಾತನಾಡಿ ” ಸ್ನೇಹ ಶಾಲೆ ಸಾಕಷ್ಟು ಅವಕಾಶಗಳನ್ನು ನಿಮಗೆ ಒದಗಿಸಿದೆ. ಅದನ್ನು ಬಳಸಿಕೊಂಡು ಉತ್ತಮ ಸಾಧನೆಯನ್ನು ಮಾಡಿರಿ” ಎಂದು ಶುಭ ಹಾರೈಸಿದರು.
ಸಂಸ್ಥೆಯ ಶಿಕ್ಷಕರಾಗಿರುವ ದೇವಿಪ್ರಸಾದ ಜಿ. ಸಿ., ಶ್ರೀಮತಿ ಜಯಂತಿ ಕೆ, ಶ್ರೀಮತಿ ಪ್ರತಿಮಾಕುಮಾರಿ ಕೆ ಎಸ್. ಇವರು ವಿದ್ಯಾರ್ಥಿಗಳ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿ ಶುಭ ಹಾರೈಸಿದರು.
8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಾದ ಹೃತಿಕಾ ಪಿ. ಯಲ್, ಅರುಣ ಎ. ಅಖಿಲ್ ಕೆ.ಯಸ್, ಸಂಜನಾ ಯು ಕೆ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಜ್ಞಾನವಿ.ಪಿ.ಜೆ., ವರ್ಷಾ. ಕೆ. ಆರ್., ಅಕ್ಷಯ್ ಡಿ. ಕೆ., ಮತ್ತು ಶ್ರೀಶ ಪಿ. ವಿ . ಇವರು ಶಾಲೆಯಲ್ಲಿ ಕಳೆದ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿದ್ಯಾರ್ಥಿನಿಯರಾದ ವೈಶಾಲಿ ಯಸ್ ಭಟ್, ಚಾರಿತ್ರ್ಯ ಕೆ.ಜಿ, ಚೈತನ್ಯ ಎ ಇವರು ಪ್ರಾರ್ಥಿಸಿದರು. 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಕುl ಶ್ರೀಯಾ ಪಿ ಆರ್ ಸ್ವಾಗತಿಸಿ, ಕುl ಶ್ರಾವ್ಯ ಎ ಆರ್ ವಂದಿಸಿದರು .
ಶಮಂತ್. ಎನ್. ಕಾರ್ಯಕ್ರಮವನ್ನು ನಿರೂಪಿಸಿದರು .