ಜಟ್ಟಿಪಳ್ಳದಲ್ಲಿ ತಾಲೂಕು ಮಟ್ಟದ ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆ

0

ನಾಗಬ್ರಹ್ಮ ಕೊಡಿಯಾಲ ಪ್ರಥಮ: ಫ್ರೆಂಡ್ಸ್ ಸುಳ್ಯ ದ್ವಿತೀಯ

ಸುಳ್ಯ ಜಟ್ಟಿಪಳ್ಳದ ಮಾನಸ ಮಹಿಳಾ ಮಂಡಲದ ಬೆಳ್ಳಿಹಬ್ಬದ ಪ್ರಯುಕ್ತ ತಾಲೂಕು ಮಟ್ಟದ ಹಗ್ಗಜಗ್ಗಾಟ ಸ್ಪರ್ಧೆ ಮಾ.3 ರಂದು ಜಟ್ಟಿಪಳ್ಳ ಶಾಲಾ ವಠಾರದಲ್ಲಿ ನಡೆಯಿತು.
ಸ್ಪರ್ಧಾ ಕಾರ್ಯಕ್ರಮವನ್ನು ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಎ.ಜಿ.ಭವಾನಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಸಕಿ ಕು.ಭಾಗೀರಥಿ ಮುರುಳ್ಯ ಶುಭಹಾರೈಸಿದರು.
ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಸರೋಜಿನಿ ಪೆಲ್ತಡ್ಕ ಸಭಾಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ಶಾರದಾ ನಾರಾಯಣ ರಾವ್ ಕೊಡಿಯಾಲಬೈಲ್, ಜಟ್ಟಿಪಳ್ಳ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುವರ್ಣಲತ, ಕೆವಿಜಿ ಆಯುರ್ವೇದ ಕಾಲೇಜ್ ಪ್ರಾಧ್ಯಾಪಕಿ ಡಾ.ಹರ್ಷಿತ ಪುರುಷೋತ್ತಮ್ ಅತಿಥಿಗಳಾಗಿದ್ದರು. ಅನಸ ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಒಟ್ಟು ಏಳು ತಂಡಗಳು ಹಗ್ಗಜಗ್ಗಾಟದಲ್ಲಿ ಭಾಗವಹಿಸಿದ್ದವು.
ನಾಗಬ್ರಹ್ಮ ಫ್ರೆಂಡ್ಸ್ ಕೊಡಿಯಾಲ ಪ್ರಥಮ, ಫ್ರೆಂಡ್ಸ್ ಸುಳ್ಯ ದ್ವಿತೀಯ, ಅಂಬಿಕಾ ಮಹಿಳಾ ಮಂಡಲ ಅರಂಬೂರು ತೃತೀಯ, ಶಿವಶಕ್ತಿ ಶಿವಾಜಿನಗರ ಮಂಡೆಕೋಲು ಚತುರ್ಥ ಬಹುಮಾನಗಳನ್ನು ಗೆದ್ದುಕೊಂಡವು.
ಪ್ರೋತ್ಸಾಹ ಕರ ಬಹುಮಾನಗಳನ್ನು ನಂದಿನಿ ಮಹಿಳಾ ಮಂಡಲ ಉಬರಡ್ಕ, ಮಾನಸ ಮಹಿಳಾ ಮಂಡಲ ಎ ತಂಡ ಹಾಗೂ ಮಾನಸ ಮಹಿಳಾ ಮಂಡಲ ಬಿ ತಂಡಗಳು ಪಡೆದುಕೊಂಡವು. ಸ್ಪರ್ಧೆಯ ವೀಕ್ಷಕ ವಿವರಣೆಗಾರರಾಗಿ ಬೂಡು ರಾಧಾಕೃಷ್ಣ ರೈಯವರು ರಂಜಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು. ಅಧ್ಯಕ್ಷತೆಯನ್ನು ಬೆಳ್ಳಿಹಬ್ಬ ಆಚರಣಾ ಸಮಿತಿ ಅಧ್ಯಕ್ಷೆ ಶ್ರೀಮತಿ ಚಂದ್ರಾಕ್ಷಿ ಜೆ.ರೈ ವಹಿಸಿದ್ದರು. ಉದ್ಯಮಿ ಶರತ್ ಅಡ್ಕಾರ್ ಬಹುಮಾನ ವಿತರಿಸಿದರು. ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಮಧುಮತಿ ಬೊಳ್ಳೂರು ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ಕ್ರೀಡಾಕೂಟದ ನಿರ್ಣಾಯಕರಾಗಿ ಸಹಕರಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ರಂಗನಾಥ್, ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜಿ.ಬಿ., ಕ್ರೀಡಾ ಸಮಿತಿ ಸಹಸಂಚಾಲಕಿ ಶ್ರೀಮತಿ ನಮಿತಾ ಪದ್ಮನಾಭ, ಮಹಿಳಾ ಮಂಡಲದ ಖಜಾಂಚಿ ಶ್ರೀಮತಿ ಸವಿತಾ ಲಕ್ಷ್ಮಣ ಆಚಾರ್ಯ, ಬೆಳ್ಳಿಹಬ್ಬ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸುನೀತ ರಾಮಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಚಿತ್ರಲೇಖ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಮತಿ ಅನನ್ಯ ಅನಿಲ್ ಸ್ವಾಗತಿಸಿ, ಕುಲದೀಪ್ ವಂದಿಸಿದರು.