ಕಾಲು ಜಾರಿ ಕೆರೆಗೆ ಬಿದ್ದು ಯುವಕ ಮೃತ್ಯು

0

ಉಬರಡ್ಕದಲ್ಲಿ ನಡೆದ ಘಟನೆ

ಯುವಕನೋರ್ವ ಕಾಲು ಜಾರಿ ತೋಟದಲ್ಲಿದ್ದ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಉಬರಡ್ಕದಿಂದ ವರದಿಯಾಗಿದೆ.


ಸುಳ್ಯ ಶಾಂತಿನಗರ ನಿವಾಸಿ ದಿ. ನಾರಾಯಣ ಮುಕರಿಯವರ ಪುತ್ರ ಯೋಗೀಶ್ ಮೃತಪಟ್ಟ ಯುವಕ. ಯೋಗೀಶ್ ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿದ್ದು, ಅವರನ್ನು ರಮೇಶ್ ಬೈಪಡಿತ್ತಾಯ ಎಂಬವರು ಉಬರಡ್ಕಕ್ಕೆ ಮರ ಕಡಿದ ಜಾಗದ ಅಳತೆಗಾಗಿ ಕರೆದುಕೊಂಡು ಹೋಗಿದ್ದರೆನ್ನಾಗಿದೆ. ಅಳತೆ ಮಾಡುವ ಸಂದರ್ಭದಲ್ಲಿ ಚೈಪೆ ಸುಂದರಿಯವರ ತೋಟವನ್ನು ಹಾದು ಹೋಗಬೇಕಾಗಿದ್ದು, ಆ ಸಂದರ್ಭ ಅವರು ಕಾಲು ಜಾರಿ ತೋಟದ ಕೆರೆಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.


ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ವಿಚಾರಣೆ ನಡೆಸಿದರು. ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಮೃತರು ಅವಿವಾಹಿತರಾಗಿದ್ದು, 36 ವರ್ಷ ವಯಸ್ಸಾಗಿತ್ತು.