ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಅನುದಾನಿತ ಶಾಲೆ ಶಿಕ್ಷಕಿ ವಂ.ಭ.ಲುವೀಜಾ ಮೆಟಿಲ್ಡಾ ಡೇಸಾ ರವರಿಗೆ ಬೀಳ್ಕೊಡುಗೆ – ಸನ್ಮಾನ

0

ಕಳೆದ 26ವರ್ಷಗಳಿಂದ ವಿವಿಧ ಶಾಲೆಗಳಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಸೈಂಟ್ ಬ್ರಿಜಿಡ್ಸ್ ಹಿ.ಪ್ರಾ.ಅನುದಾನಿತ ಶಾಲೆ ಶಿಕ್ಷಕಿ ವಂ.ಭ.ಲುವೀಜಾ ಮೆಟಿಲ್ಡಾ ಡೇಸಾರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮವು ಮಾ.05 ರಂದು ನಡೆಯಿತು.
ಶಾಲಾ ಸಂಚಾಲಕ ವಿಕ್ಟರ್ ಡಿ.ಸೋಜಾರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕಿ ವಂ.ಭ.ಲುವೀಜಾ ಮೆಟಿಲ್ಡಾ ಡೇಸಾರವರನ್ನು ಶಾಲು ಹೊದಿಸಿ ಫಲ ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.


ತನ್ನ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಇ, ಫಾದರ್ ಪೀಟರ್ ಡೇಸಾ, ಮುಖ್ಯ ಶಿಕ್ಷಕಿ ಅಂತೋನಿ ಮೇರಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಪ್ರವೀಣ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಅಂತೋನಿ ಮೇರಿಯವರು ಸ್ವಾಗತಿಸಿ,ಶಿಕ್ಷಕಿ ವಲ್ಸರವರು ಕಾರ್ಯಕ್ರಮ ನಿರೂಪಿಸಿ,ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಿಕ್ಷಕಿ ದೀಪಿಕಾರವರು ವಂದಿಸಿದರು.ಮೊದಲು ವಿದ್ಯಾರ್ಥಿಗಳಿಂದ ಸ್ವಾಗತ ನೃತ್ಯ ನಡೆಯಿತು.