ಪತ್ರಕರ್ತ ಕೃಷ್ಣ ಕೋಲ್ಚಾರ್‌ರಿಗೆ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಸನ್ಮಾನ

0


ಮಂಗಳೂರು ಪ್ರೆಸ್‌ಕ್ಲಬ್ ವತಿಯಿಂದ ಮಾ. 10 ರಂದು ಪ್ರೆಸ್ ಕ್ಲಬ್ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ 9 ಮಂದಿ ಪತ್ರಕರ್ತರಿಗೆ ಪ್ರೆಸ್‌ಕ್ಲಬ್ ಗೌರವ ಸನ್ಮಾನ ನೀಡಲು ನಿರ್ಧರಿಸಲಾಗಿದೆ.

ಈ 9 ಮಂದಿಯಲ್ಲಿ ಮಂಗಳೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆಯ ಸೀನಿಯರ್ ಕಾಪಿ ಎಡಿಟರ್ ಸುಳ್ಯದವರಾದ ಕೃಷ್ಣ ಕೋಲ್ಚಾರ್‌ರಿಗೆ ಕೂಡಾ ಗೌರವ ಸನ್ಮಾನ ಸಲ್ಲಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯದವರಾದ ಪಿ.ಬಿ.ಹರೀಶ್ ರೈ ವಹಿಸಲಿದ್ದಾರೆ.