ಪಂಜ: ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ-ಸನ್ಮಾನ

0

ಶ್ರೀ ಶಾರದಾಂಬ ಯಕ್ಷಗಾನ ಭಕ್ತ ವೃಂದ ಪಂಜ ಇದರ ಆಶ್ರಯದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ರವರಿಂದ ಶ್ವೇತಕುಮಾರ ಚರಿತ್ರೆ -ಅಗ್ರಪೂಜೆ ಎಂಬ ಕಥಾ ಭಾಗ ಮಾ.8 ರಂದು ಸಂಜೆ ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ವಠಾರದಲ್ಲಿ ಪ್ರದರ್ಶನ ಗೊಂಡಿತು.ಸಂಜೆ ಚೌಕಿಯಲ್ಲಿ ಶ್ರೀ ದೇವಿಗೆ ಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು.


ಸನ್ಮಾನ :


ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ನಡೆಯಿತು.ಅಡುಗೆ ಪಾಕತಜ್ಞ ಅರ್ನಾಡಿ ಕೆಟರರ್ ನ ಪ್ರಸಾದ್ ಅರ್ನಾಡಿ, ಯುವ ತೇಜಸ್ ರಕ್ತ ನಿಧಿ ಸಂಯೋಜಕ ಜನಾರ್ಧನ ನಾಗತೀರ್ಥ, ಭಜಕ, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವ ಪುರುಷೋತ್ತಮ ಆಚಾರ್ಯ ನಾಗತೀರ್ಥ ರವನ್ನು ಸನ್ಮಾನಿಸಲಾಯಿತು.


ದೇವಳದ ಉತ್ಸವ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವಾಧ್ಯಕ್ಷ ಪದ್ಮನಾಭ ರೈ ಅಗೋಳಿಬೈಲುಗುತ್ತು, ರಾಜ್ಯ ಭಜನಾ ಪರಿಷತ್ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಯತೀಶ್ ರೈ ದುಗಲ್ಲಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಯತೀಶ್ ರೈ ದುಗಲ್ಲಡ್ಕ ಸ್ವಾಗತಿಸಿದರು ಮತ್ತು ವಂದಿಸಿದರು.