ಜಬಳೆಯಲ್ಲಿ ಬೈಕ್ ಕಾರು ಅಪಘಾತ – ಸವಾರರು ಜಖಂ

0

ಸೋಣಂಗೇರಿ ಗುತ್ತಿಗಾರು ರಸ್ತೆಯ ಎಲಿಮಲೆ ಬಳಿಯ ಜಬಳೆ ಎಂಬಲ್ಲಿ ತಿರುವಿನಲ್ಲಿ ಕಾರು ಮತ್ತು ಬೈಕ್ ಮಧ್ಯೆ ಅಪಘಾತವಾದ ಘಟನೆ ನಡೆದಿದೆ.
ಎಲಿಮಲೆ ಕಡೆಯಿಂದ ಪುತ್ತೂರು ಕಡೆಗೆ ಚಲಾಯಿಸುತ್ತಿದ್ದ ಕಾರಿಗೆ( ಕೆಎ 21 ಎಫ್8950) ಪುತ್ತೂರು ಕಡೆಯಿಂದ ಗುತ್ತಿಗಾರು ಕಡೆಗೆ ಬರುತ್ತಿದ್ದ ಬೈಕ್ (ಕೆಎ 21 ಡಿ 2378) ರಾಂಗ್ ಸೈಡ್ ನಲ್ಲಿ ಬಂದು ಗುದ್ದಿದೆ.
ಪರಿಣಾಮ ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ‌.

ಸ್ಥಳಕ್ಕೆ ಪೋಲೀಸರು ಆಗಮಿಸಿ ಪರಿಶೀಲಿಸಿದ್ದಾರೆ.