ರಾಜಾರಾಮ ದೇಂಗೋಡಿ ನಿಧನ

0

ಸುಳ್ಯ ಕಸಬಾ ದೇಂಗೋಡಿ ರಾಜರಾಮರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 66 ವರ್ಷ ವಯಸ್ಸಾಗಿತ್ತು

ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಇವರು ಉತ್ತಮ ಹಾಡುಗಾರರಾಗಿಯೂ, ಕೀಬೋರ್ಡ್ ವಾದಕರಾಗಿಯೂ ಪ್ರಸಿದ್ಧರಾಗಿದ್ದರು.

ಮೃತರು ಪತ್ನಿ ಯಶೋದ, ಪುತ್ರಿ ಶಿಲ್ಪ, ಪುತ್ರ ಚಾರ್ಟರ್ಡ್ ಅಕೌಂಟೆಂಟ್ ಶ್ರೀನಿಧಿ, ಸೊಸೆ ವಿಷ್ಮ , ಮೊಮ್ಮಗಳು, ಕುಟುಂಬಸ್ಥರನ್ನು ಅಗಲಿದ್ದಾರೆ.