ನಾರ್ಣಪ್ಪ‌ ಗೌಡ ಕೇರ್ಪಳ ನಿಧನ

0

ಸುಳ್ಯ‌ ಕೇರ್ಪಳ ನಿವಾಸಿ ನಾರ್ಣಪ್ಪ ಗೌಡರು ಹೃದಯಾಘಾತದಿಂದ ಮಾ.31ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮಾ.30ರಂದು ಮನೆಯಲ್ಲಿದ್ದ ಸಂದರ್ಭ ಎದೆ ನೋವು ಕಾಣಿಸಿಕೊಂಡ ನಾರ್ಣಪ್ಪ ಗೌಡರನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಕರೆತಂದರು. ಬಳಿಕ ವೈದ್ಯರ ಸಲಹೆ ಮೇರೆಗೆ ಮಂಗಳೂರು ಆಸ್ಪತ್ರೆಗೆ ‌ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.

ಮೃತರು ಪುತ್ರ ಯತೀಶ್ ಕೇರ್ಪಳ ಹಾಗೂ ಪುತ್ರಿ ಶ್ರೀಮತಿ ಕವಿತಾ, ಕುಟುಂಬಸ್ಥರನ್ನು ಅಗಲಿದ್ದಾರೆ.