ಸುಳ್ಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಯ ಸಭಾಂಗಣಕ್ಕೆ ಕೋಟೆ ಪೌಂಡೇಶನ್ ನಿಂದ ಟೈಲ್ಸ್ & ಗ್ರಿಲ್ಸ್ ಅಳವಡಿಕೆಯ ಕೊಡುಗೆ

0

ಸುಳ್ಯ ಸರಕಾರಿ
ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಳ್ಯ ರೋಟರಿ ಸಿಟಿ ಕ್ಲಬ್ ನವರು ನಿರ್ಮಿಸಿದ ಸಭಾಭವನಕ್ಕೆ ರೈಟ್ ಟು ಲೈವ್ ಬೆಂಗಳೂರಿನ ಕೋಟೆ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೆಲಕ್ಕೆ ಟೈಲ್ಸ್ ಮತ್ತು ಗ್ರಿಲ್ಸ್ ಅಳವಡಿಸಿಕೊಟ್ಟಿರುತ್ತಾರೆ. ಮಾದರಿ ಶಾಲಾ ಹಿರಿಯ ವಿದ್ಯಾರ್ಥಿ ಆರ್.ಕೆ.ಭಟ್ ರವರು ಟೈಲ್ಸ್ ಅಳವಡಿಸಿದ ಸಭಾಂಗಣವನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕೋಟೆ ಫೌಂಡೇಶನ್ನಿನ ಪ್ರದೀಪ್ ರವನ್ನು ಶಾಲೆಯ ವತಿಯಿಂದ ಹಿರಿಯ ವಿದ್ಯಾರ್ಥಿ ಆರ್.ಕೆ. ಭಟ್ ರವರು ಅಭಿನಂದಿಸಿದರು.

ಶಾಲೆಯ ಎಸ್. ಡಿ.ಎಂ.ಸಿ ಅಧ್ಯಕ್ಷ ರವಿರಾಜ ಕಮಿಲಡ್ಕ , ಮುಖ್ಯ ಶಿಕ್ಷಕಿ ಶ್ರೀಮತಿ ಸುನಂದಾ ಶೆಟ್ಟಿ ಉಪಸ್ಥಿತರಿದ್ದರು. ಶಿಕ್ಷಕಿ ಪ್ರೇಮಾವತಿ ವಂದಿಸಿದರು. ಶಿಕ್ಷಕಿ ಶ್ರೀಮತಿ ಶೀಲಾವತಿ ಕಾರ್ಯಕ್ರಮ ನಿರೂಪಿಸಿದರು. ಹೇಮಲತಾ ಎಂ .ಎ ಮತ್ತು ಮಲ್ಲಿಕಾ ಸಹಕರಿಸಿದರು.ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.