ಎ.12ರಂದು ಅರಂತೋಡಿನಲ್ಲಿ ಮತದಾನ ಜಾಗೃತಿ ಕುರಿತು ಕಾಲ್ನಡಿಗೆ ಜಾಥಾ

0

ಅರಂತೋಡು ಗ್ರಾಮ ಪಂಚಾಯತಿ, ನೆಹರೂ ಮೆಮೋರಿಯಲ್ ಪದವಿಪೂರ್ವ ಕಾಲೇಜು, ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಇಲಾಖೆಗಳು, ಗ್ರಾ.ಪಂ. ವ್ಯಾಪ್ತಿಯ ಸಂಘ – ಸಂಸ್ಥೆಗಳ ಸಹಯೋಗದೊಂದಿಗೆ ಮತದಾನ ಜಾಗೃತಿ ಕುರಿತು ಕಾಲ್ನಡಿಗೆ ಜಾಥಾ ಕಾರ್ಯಕ್ರಮವು ಎ.12ರಂದು ಅರಂತೋಡಿನಲ್ಲಿ ನಡೆಯಲಿದೆ.

ಮತದಾನ ಜಾಗೃತಿ ಕುರಿತು ಕಾಲ್ನಡಿಗೆ ಜಾಥಾವು ಅರಂತೋಡಿನ ಅಡ್ಕಬಳೆ ಕಾಂಪ್ಲೆಕ್ಸ್ ನಿಂದ ಪ್ರಾರಂಭಗೊಂಡು ಅರಂತೋಡು ಪೇಟೆಯ ಮೂಲಕ ಸಾಗಿ ಗ್ರಾ.ಪಂ. ವಠಾರದವರೆಗೆ ಸಾಗಿ ಬರಲಿದೆ.

ಈ ಕಾಲ್ನಡಿಗೆ ಜಾಥಾದಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಸಂಘ – ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮದ ನಾಗರಿಕರು ಭಾಗವಹಿಸಬೇಕೆಂದು ಗ್ರಾ.ಪಂ. ವತಿಯಿಂದ ತಿಳಿಸಲಾಗಿದೆ.