ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ವಾಲಿಬಾಲ್ ತರಬೇತಿ ಶಿಬಿರ

0

ಸುಳ್ಯ ತಾಲೂಕೂ ವಾಲಿಬಾಲ್ ಅಸೋಸಿಯೇಷನ್ ವತಿಯಿಂದ 8 ದಿನಗಳ ಕಾಲ ತಾಲೂಕಿನ 18 ವರ್ಷ ವಯೋಮಾನದ ಒಳಗಿನ ಮತ್ತು 13 ವರ್ಷ ಮೇಲ್ಪಟ್ಟ ಹುಡುಗ ಹುಡುಗಿಯರಿಗೆ ವಾಲಿಬಾಲ್ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಸರನ್ನು ನೊಂದಾಯಿಸಿ ಕೊಳ್ಳಬಹುದು. ಶಿಬಿರದಲ್ಲಿ ಭಾಗವಹಿಸಲು ಇಚ್ಚಿಸುವವರು

ಏ. 16rರಂದು ಮಂಗಳವಾರ ದಂದು ಸಂಜೆ ಗಂಟೆ 3.45 ಕ್ಕೆ ಯುವಜನ ಸಂಯುಕ್ತ ಮಂಡಳಿ ಬಳಿಯ ಮೈದಾನದಲ್ಲಿ ಹಾಜರಿರಬೇಕು ಎಂದು ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕುಡೆಕಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾಗವಹಿಸುವ ಎಲ್ಲರೂ 500 ರೂಪಾಯಿಗಳ ತರಬೇತಿ ಶುಲ್ಕವನ್ನು ನೀಡಿ ಹೆಸರು ನೊಂದಾಯಿಸಿ ಕೊಳ್ಳಬೇಕು .ಜೊತೆಗೆ ಆಧಾರ್ ಕಾರ್ಡ್ ಪ್ರತಿಯನ್ನು ಒದಗಿಸತಕ್ಕದು. ಶಿಬಿರವು ಮುಂಜಾನೆ ಮತ್ತು ಸಾಯಂಕಾಲ ಏರಡು ಅವಧಿಗಳಲ್ಲಿ ನಡೆಯಲಿದೆ. ಸುಳ್ಯ ತಾಲೂಕಿನ 18 ರ ವಯೋ ಮಿತಿಗಿಂತ ಕೆಳಗಿನ ಮತ್ತು 13 ವರ್ಷಕ್ಕಿಂತ ಮೇಲ್ಪಟ್ಟ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮಾತ್ರ ತರಬೇತಿಯಲ್ಲಿ ಭಾಗಹಿಸಲು ಅವಕಾಶ. ಯುವಜನ ಸಂಯುಕ್ತ ಮಂಡಳಿ ಬಳಿಯ ಕ್ರೀಡಾಂಗಣದಲ್ಲಿ ಶಿಬಿರವು ನಡೆಯಲಿದೆ. ಇದೇ ತಿಂಗಳ ದಿನಾಂಕ 16 ರಿಂದ ಆರಂಭಗೊಂಡು ಮುಂದಿನ 8 ದಿನಗಳ ಕಾಲ ತರಬೇತಿ ಕಾರ್ಯಕ್ರಮ ನಡೆಯಲಿದೆ ವಸತಿ ವ್ಯವಸ್ಥೆ ಇರುವುದಿಲ್ಲ ಆಟಗಾರರೇ ವಸತಿ ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು. ಮೊದಲ ಅವಧಿ ಮುಂಜಾನೆ 5.50ಕ್ಕೆ ಗೆ ಶಿಬಿರವು ಆರಂಭಗೊಳ್ಳಲಿದ್ದು 9ಕ್ಕೆ ಮುಕ್ತಾಯವಾಗಲಿದೆ. 2ನೆಯ ಅವಧಿ ಸಾಯಂಕಾಲ ಗಂಟೆ 4ಕ್ಕೆ ಗೆ ಆರಂಭವಾಗಿ 6.30ಕ್ಕೆ ಕೊನೆಗೊಳ್ಳಲಿದೆ ಹಾಗಾಗಿ ಎಲ್ಲಾ ಶಿಬಿರಾರ್ಥಿಗಳು ಸರಿಯಾದ ಸಮಯಕ್ಕೆ ಏರಡೂ ಅವಧಿಯಲ್ಲಿ ಕೂಡ ಭಾಗವಹಿಸುವುದು ಕಡ್ಡಾಯ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು ಜಯಪ್ರಕಾಶ್ ಕುಡೆಕಲ್ಲು (9632843046), ಇರ್ಫಾನ್ ಜನತಾ (9901725456) ಸುದರ್ಶನ್ ಸುಳ್ಯ (9916071215) ನಿತಿನ್ ಗೂನಡ್ಕ ( +919740248161) ಪ್ರಕಟಣೆ ತಿಳಿಸಿದೆ.