ಹಾಸನ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಿಂದ ಶ್ರೇಯಸ್ ಮಾವಂಜಿ ಅವರಿಗೆ ಎಂ.ಬಿ.ಬಿ.ಎಸ್. ಪದವಿ ಪ್ರಧಾನ

0

ಹಾಸನದ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಕಾಲೇಜಿನಲ್ಲಿ ಎಂ.ಬಿ. ಬಿ.ಎಸ್. ಪದವಿ ಪೂರ್ತಿಗೊಳಿಸಿದ ಮಂಡೆಕೋಲು ಗ್ರಾಮದ ಮಾವಂಜಿ ಯ ಶ್ರೇಯಸ್ ಅವರಿಗೆ ಹಾಸನ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಕಾಲೇಜಿನಲ್ಲಿ ಎ.15ರಂದು ಎಂ.ಬಿ.ಬಿ.ಎಸ್. ಡಾಕ್ಟರ್ ಪದವಿ ಪ್ರಧಾನ ಮಾಡಲಾಯಿತು.

ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಸಿ.ಆರ್. ಚಂದ್ರಶೇಖರ , ಮಾಜಿ ಐ.ಪಿ.ಎಸ್. ಅಧಿಕಾರಿ ಶಂಕರ ಬಿದರಿ ಅವರು ಶ್ರೇಯಸ್ ಮಾವಂಜಿ ಅವರಿಗೆ ಪದವಿ ಪ್ರಧಾನ ಮಾಡಿದರು.

ಡಾ. ಶ್ರೇಯಸ್ ಅವರು ಮಂಡೆಕೋಲು ಗ್ರಾಮದ ಮಾವಂಜಿ ಗಂಗಾಧರ ಮಾವಂಜಿ ಹಾಗೂ ಶ್ರೀಮತಿ ಉಷಾ ದಂಪತಿಯ ಪುತ್ರ.