ಪರಪ್ಪೆ ಬಳಿ ನದಿಯಲ್ಲಿ ಮುಳುಗಿ ಈಶ್ವರಮಂಗಲದ ವ್ಯಕ್ತಿ ಮೃತ್ಯು

0

ಮಂಡೆಕೋಲು ಗ್ರಾಮ ಮುರೂರು ಸಮೀಪ ಪರಪ್ಪೆ ನದಿಯಲ್ಲಿ ಓರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.
ಈಶ್ವರ ಮಂಗಲದ ನಾಲ್ಕು ಜನ ಮುರೂರು ಸಮೀಪ ಪರಪ್ಪೆ ನದಿಗೆ ಮೀನು ಹಿಡಿಯಲು ಬಂದಿದ್ದರೆನ್ನಲಾಗಿದೆ.
ಈ ಸಂದರ್ಭದಲ್ಲಿ ನಾಲ್ವರಲ್ಲಿ ಒಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಮೃತಪಟ್ಟ ವ್ಯಕ್ತಿ ಈಶ್ವರಮಂಗಲ ಪ್ರವೀಣ್ ಎಂದು ಗುರುತಿಸಲಾಗಿದೆ.
ಮೃತದೇಹವನ್ನು ಪೈಚಾರ್ ಮರಳುವ ತಜ್ಞರ ತಂಡದವರು ನದಿಯಿಂದ ಮೇಲೆತ್ತಿ ಸುಳ್ಯ ಅಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ.
ಸುಳ್ಯ ಪೋಲಿಸ್ ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.