ಆಲೆಟ್ಟಿ: ಕುಂಭಕೋಡು ಭಾಗದಲ್ಲಿ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು

0

ಆಲೆಟ್ಟಿ ಗ್ರಾಮದಲ್ಲಿ ಕಳೆದ ಹಲವಾರು ದಿನಗಳಿಂದ ಕಾಡಾನೆಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡು ಬರುತ್ತಿದೆ.

ಕಳೆದ ಕೆಲ ದಿನಗಳ ಹಿಂದೆ ನಾರ್ಕೋಡು ಕೋಲ್ಚಾರು ರಸ್ತೆಯ ಮಧ್ಯೆ ಬಿಲ್ಲರಮಜಲು ಎಂಬಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟುತ್ತಿದ್ದ ದೃಶ್ಯವು ಸಾಮಾಜಿಕ ಜಾಲತಾಣದ ಮೂಲಕ ಹರಿಯ ಬಿಡಲಾಗಿತ್ತು.ಇದೀಗ ಕಳೆದ ರಾತ್ರಿ ಮತ್ತೆ ಕುಂಭಕೋಡು ಭಾಗದಲ್ಲಿ ಕಾಣಿಸಿಕೊಂಡ ಆನೆಗಳು ನ್ಯಾಯವಾದಿ ಸತೀಶ್ ಕುಂಭಕೋಡು ರವರ ತೋಟಕ್ಕೆ ನುಗ್ಗಿ ಕೃಷಿ ಬೆಳೆಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.