ಖಂಡಿಗೆಮೂಲೆಯಲ್ಲಿ ರಸ್ತೆಯ ಮೇಲೆ ಬಿದ್ದ ಮರದ ತೆರವು ಕಾರ್ಯಾಚರಣೆ

0

ಮೆಸ್ಕಾಂ ಇಲಾಖೆಯ ನೌಕರರಿಂದ ವಿದ್ಯುತ್ ಸಂಪರ್ಕದ ದುರಸ್ತಿ ಕಾರ್ಯ

ಸುಳ್ಯದಿಂದ ಚೊಕ್ಕಾಡಿಯ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಖಂಡಿಗೆಮೂಲೆ ಎಂಬಲ್ಲಿ ನಿನ್ನೆ ಸುರಿದ ಗಾಳಿ‌ ಮಳೆಗೆ ಮರವೊಂದು ಬಿದ್ದುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಇಂದು ಬೆಳಗ್ಗೆ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಮರ ಬೀಳುವ ಸಂದರ್ಭದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಮೇಲೆ ಬಿದ್ದುದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಬೆಳಗ್ಗಿನಿಂದಲೇ ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಬಂದು ವಿದ್ಯುತ್ ಕಂಬಗಳನ್ನು ಸರಿ ಪಡಿಸಿ‌ ವಿದ್ಯುತ್ ಸಂಪರ್ಕದ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.