ದೇವಕಿ ಮೆಂಟೆಕಜೆ ನಿಧನ

0

ಕಲ್ಮಕಾರು ಗ್ರಾಮದ ದೇವಕಿ ಮೆಂಟೆಕಜೆ ಮೇ. 18ರಂದು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಅಸೌಖ್ಯತೆ ಹಿನ್ನೆಲೆಯಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿತ್ತು.

ಮೃತರು ಪುತ್ರರಾದ ವೆಂಕಪ್ಪ ಗೌಡ, ದುಗ್ಗಪ್ಪ ಗೌಡ, ಕುಶಾಲಪ್ಪ ಗೌಡ, ಆನಂದ ಗೌಡ, ಬೆಳ್ಯಪ್ಪ ಗೌಡ, ಪುತ್ರಿಯರಾದ ಶ್ರೀಮತಿ ಚಿನ್ನಮ್ಮ ಕುಂಞಪ್ಪ ಕಣ್ಕಲ್, ಶ್ರೀಮತಿ ಹೇಮಾವತಿ ಕಮಲಾಕ್ಷ ಪಾಲ್ತಾಡು, ಶ್ರೀಮತಿ ಹರಿಣಾಕ್ಷಿ ಮೋನಪ್ಪ ಉಪ್ಪಿನಂಗಡಿ, ಶ್ರೀಮತಿ ಜಯಲಕ್ಷ್ಮಿ ಗುಡ್ಡಪ್ಪ ಪೆರ್ಲಂಪಾಡಿ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಮರಿಮಕ್ಕಳು, ಕುಟುಂಬಸ್ಥರು ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.