ಚೊಕ್ಕಾಡಿ: ಗರುಡ ಯುವಕ ಮಂಡಲ ವತಿಯಿಂದ ಪ್ರಯುಕ್ತ ಹಣ್ಣಿನಗಿಡ ವಿತರಣೆ

0

ಗರುಡ ಯುವಕ ಮಂಡಲ ಚೊಕ್ಕಾಡಿ ವತಿಯಿಂದ ಜೂ.14 ರಂದು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ, ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಹಣ್ಣಿನ ಗಿಡ ವಿತರಣಾ ಕಾರ್ಯಕ್ರಮ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅಜ್ಜನಗದ್ದೆಯಲ್ಲಿ ಜರುಗಿತು.

ಯುವಕ ಮಂಡಲದ ಅಧ್ಯಕ್ಷರಾದ ಯತಿನ್ ಕೊಳಂಬೆಯವರು ಅಧ್ಯಕ್ಷತೆ ವಹಿಸಿದ್ದರು. ಯುವಜನ ಸಂಯುಕ್ತ ಮಂಡಳಿಯ ಗೌರವಾಧ್ಯಕ್ಷ ತೇಜಸ್ವಿ ಕಡಪಳ , ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಈಶ್ವರ ಕಾಯರ , ಉಪಾಧ್ಯಕ್ಷೆ ಶ್ರೀಮತಿ ಗೀತಾ ಕೊರತ್ಯಡ್ಕ , ಯುವಜನಸಂಯುಕ್ತ ಮಂಡಳಿಯ ನಿರ್ದೇಶಕ ಮುರಳಿ ನಳಿಯಾರು, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ರೂಪವಾಣಿ ಕೆರೆಮೂಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪರಿಸರ ರಕ್ಷಣೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಲಾಯಿತು. ರಂಬೂಟನ್, ನೇರಳೆ, ನಕ್ಷತ್ರ ಹಣ್ಣು, ನೆಲ್ಲಿ, ನಿಂಬೆ ಕಾಯಿ, ಸಂಪಿಗೆ, ರಕ್ತ ಚಂದನ, ಶ್ರೀ ಗಂಧ ದ ಗಿಡಗಳನ್ನು ವಿತರಿಸಲಾಯಿತು. ಯತಿನ್ ಕೊಳಂಬೆ ಸ್ವಾಗತಿಸಿ, ಮನೋಜ್ ಪಡ್ಪು ವಂದನಾರ್ಪಣೆಗೈದರು . ಅರುಣ್ ಕುಮಾರ್ ಮುಂಡಾಜೆರವರು ಕಾರ್ಯಕ್ರಮ ನಿರೂಪಿಸಿದರು.