ವಿದ್ಯಾರ್ಥಿಗಳಿಗೆ ಸಾಮಾಜಿಕ ಜವಾಬ್ದಾರಿ ಬೆಳೆಸಿಕೊಳ್ಳಲು ನಾಯಕತ್ವ ಮುಖ್ಯ : ಡಾ. ಲೀಲಾಧರ್ ಡಿ.ವಿ.

0


ಸಮಾಜದಲ್ಲಿ ಸಾಧಕರು,ನಾಯಕರಾಗುವ ಮೊದಲು ವಿದ್ಯಾರ್ಥಿ ಹಂತದಲ್ಲಿ ಸಮಯ ಪ್ರಜ್ಞೆ, ಸೂಕ್ತ ನಿರ್ಧಾರ, ಜವಾಬ್ದಾರಿ ಮೊದಲಾದ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಿ.ಉತ್ತಮ ಚಟುವಟಿಕೆಗಳನ್ನು ಧನಾತ್ಮಕ ಕಲಿಕೆಗೆ ಪೂರಕವಾಗಿ ಸಂಘಟಿಸಿ ಎಂದು ಸುಳ್ಯದ ಕೆವಿಜಿ ಆಯುರ್ವೇದ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯ ಪ್ರಾoಶುಪಾಲರಾದ ಡಾ. ಲೀಲಾಧರ್ ಡಿ ವಿ ಹೇಳಿದರು.

ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎ ಓ ಎಲ್ ಈ (ರಿ )ಸುಳ್ಯ ಇದರ ಅಧ್ಯಕ್ಷರಾದ ಡಾ ಕೆ ವಿ ಚಿದಾನಂದ ಅವರು ದೀಪ ಪ್ರಜ್ವಲನೆಗೊಳಿಸಿ ಮಾತನಾಡಿ ವಿದ್ಯೆ ಕಲಿಯುವುದು ತಪಸ್ಸು ಇದ್ದಂತೆ, ವಿದ್ಯೆಗೆ ಸಮಾನವಾದುದು ಯಾವುದು ಇಲ್ಲ, ಪ್ರತಿಯೊಂದು ಸಾಧನೆಗೆ ಪ್ರಯತ್ನ ಮುಖ್ಯ. ಶಿಸ್ತುಬದ್ದ ಜೀವನ ಶೈಲಿ ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಪೂರಕ. ಪೂಜ್ಯ ಕೆವಿಜಿ ಯವರ ಪಂಚ ಸೂತ್ರಗಳು, ಅವರ ಶಿಕ್ಷಣ ಕಾಳಜಿ ಸಮಾಜಕ್ಕೆ ವಿದ್ಯಾವಂತರನ್ನು, ಸಾಧಕರನ್ನು ಕೊಡುಗೆಯಾಗಿ ನೀಡಿದೆ. ವಿದ್ಯಾರ್ಥಿಗಳು ಸಾಧನೆಗೈದು ಸಂಸ್ಥೆಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಶುಭ ಹಾರೈಸಿದರು ವೇದಿಕೆಯಲ್ಲಿ ಅತಿಥಿಗಳಾಗಿ ಸಂಸ್ಥೆಯ ಆಡಳಿತ ಅಧಿಕಾರಿ ಚಂದ್ರಶೇಖರ ಪೇರಾಲ್,ಪದವಿ ವಿಭಾಗದ ಪ್ರಾಚಾರ್ಯರಾದ ಡಾ ರುದ್ರ ಕುಮಾರ್ ಎಂ ಎಂ, ಸಂಸ್ಥೆಯ ಪ್ರಾಚಾರ್ಯರಾದ ಮಿಥಾಲಿ ಪಿ ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಗಾಯತ್ರಿ ಪಿ , ರಿಯಾ ಕೆಜೆ, ಮಣಿಕಂಠ ಉಪಸ್ಥಿತರಿದ್ದರು.ದ್ವಿತೀಯ ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಅಂಕ ಗಳಿಸಿದ 47ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.


ವಿದ್ಯಾರ್ಥಿನಿಯರಾದ ಆಜ್ಞ ಬಳಗದವರು ಪ್ರಾರ್ಥಿಸಿ, ಪ್ರಾಚಾರ್ಯರಾದ ಮಿಥಾಲಿ ಪಿ ರೈ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ ವಿದ್ಯಾರ್ಥಿ ಸಂಘದ ನಾಯಕರು,ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.

ಸಭಾ ಅಧ್ಯಕ್ಷರು, ಸಂಸ್ಥೆಯ ಪ್ರಾoಶುಪಾಲರು ವಿದ್ಯಾರ್ಥಿ ಸಂಘದ ನಾಯಕರು,ಪ್ರತಿನಿಧಿಗಳಿಗೆ ಬ್ಯಾಡ್ಜ್ ಪ್ರದಾನ ಮಾಡಿದರು.ದ್ವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಮೋಘ ಸಂವಿಧಾನ ಪೀಠಿಕೆ ಓದಿದರು;ಸುಮಂತ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಿಸ್ಟಿಂಕ್ಷನ್ ಅಂಕ ಗಳಿಸಿದವರ ಪಟ್ಟಿಯನ್ನು ಉಪನ್ಯಾಸಕಿಯರಾದ ಸಾವಿತ್ರಿ ಕೆ, ರೇಷ್ಮಾ ಎಂ, ಸುಚೇತಾ ಎಂ, ಉಮಾಶ್ರೀ ಪ್ರಭು ವಾಚಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಕೆ ಸಹನ ಭಟ್, ಅಂಬಿಕಾ ಅನಿಸಿಕೆ ವ್ಯಕ್ತ ಪಡಿಸಿದರು.ವಿದ್ಯಾರ್ಥಿಗಳಾದ ಕೃತ ಸ್ವರ ದೀಪ್ತ ಕೆ, ಖುಷಿರ ನಿರೂಪಿಸಿ, ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ.ಬಿ. ಸಭಾ ಕಾರ್ಯಕ್ರಮದಲ್ಲಿ ಸಹಕರಿಸಿದರು. ವಿದ್ಯಾರ್ಥಿ ನಾಯಕಿ ಗಾಯತ್ರಿ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪ್ರ ಪಿಯು ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.ರಿಯಾ ಕೆಜೆ ವಂದಿಸಿದರು.