ಸುಳ್ಯ :ನಡು ರಸ್ತೆಯಲ್ಲಿ ಮಲಗಿ ಕುಡುಕನ ಅವಾಂತರ

0

ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ

ಸುಳ್ಯ ನಗರದ ಪೊಲೀಸ್ ಸ್ಟೇಷನ್ ಮುಂಭಾಗದಲ್ಲಿ ಕುಡುಕನೋರ್ವ ನಡು ರಸ್ತೆಯಲ್ಲಿ ಮಲಗಿ ಅವಾಂತರ ಎಬ್ಬಿಸಿದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ಘಟನೆ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಆತನಿಗೆ ಬಿಸಿ ಬಿಸಿ ಕಜ್ಜಾಯವನ್ನು ನೀಡುವ ಮೂಲಕ ರಸ್ತೆಯಿಂದ ಎತ್ತಿ ಬದಿಯಲ್ಲಿ ಕುಳ್ಳಿರಿಸಿದ್ದಾರೆ. ಈ ಎಲ್ಲಾ ಘಟನೆಯನ್ನು ಸ್ಥಳೀಯ ನಿವಾಸಿಗಳು ಕಂಡು ಕುಡುಕ ಮಾಡಿದ ಅವಾಂತರಕ್ಕೆ ಮನಸ್ಸಿನೊಳಗೆ ನಕ್ಕಿದ್ದಾರೆ.